ಇಸ್ಲಾಮಾಬಾದ್: ಸೋಲಾರ್ ಕಿಡ್ಸ್ ಎಂದು ಹೆಸರು ಪಡೆದಿರುವ ಪಾಕಿಸ್ಥಾನದ ಇಬ್ಬರು ಸಹೋದರರನ್ನು ಕಂಡು ಇಸ್ಲಾಮಾಬಾದ್ನ ಆಸ್ಪತ್ರೆಯ ವೈದ್ಯರೂ ಕೂಡಾ ಬೆರಗಾಗಿದ್ದಾರೆ.
9 ಮತ್ತು 13 ವರ್ಷ ಪ್ರಾಯದ ಈ ಬಾಲಕರು ಮುಂಜಾನೆಯ ಸೂರ್ಯೋದಯ ಆದಂತೆ ಇತರ ಸಾಮಾನ್ಯ ಮಕ್ಕಳಂತೆ ಸಕ್ರಿಯರಾಗಿರುತ್ತಾರೆ. ಆದರೆ ಸಂಜೆ ಸೂರ್ಯಾಸ್ತವಾದಂತೆ ಸಂಪೂರ್ಣ ದುರ್ಬಲಗೊಂಡು ನಿಶಕ್ತರಾಗಿ, ನಡೆದಾಡಲು, ಮಾತನಾಡಲು ಆಗದ ಸ್ಥಿತಿ ಉಂಟಾಗುತ್ತದೆ. ಈ ಕಾಯಿಲೆಗೆ ಯಾವುದೇ ಕಾರಣ, ಲಕ್ಷಣಗಳು ಕಂಡು ಹಿಡಿಯಲು ಸಾಧ್ಯವಾಗಿಲ್ಲ ಎಂದು ಪಾಕಿಸ್ಥಾನ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈಯನ್ಸ್ನ ಪ್ರೋ. ಜಾವೇದ್ ಅಕ್ರಮ್ ಹೇಳಿದ್ದಾರೆ.
ಈ ಸಹೋದರರನ್ನು ವಿವಿಧ ರೀತಿಯ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಅವರ ರಕ್ತದ ಮಾದರಿಗಳನ್ನು ವಿದೇಶಿ ತಜ್ಞ ವೈದ್ಯರಿಗೆ ಕಳುಹಿಸಲಾಗಿದೆ ಎಂದು ಅಕ್ರಮ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.