ನವದೆಹಲಿ: ಇನ್ನು ಮುಂದೆ ಭಾರತದ ಭೂಪಟದಿಂದ ಅರುಣಾಚಲ ಪ್ರದೇಶ ಅಥವಾ ಪಾಕ್ ಆಕ್ರಮಿತ ಕಾಶ್ಮೀರವನ್ನು ಹೊರಗಿಡುವ ಸಾಹಸ ಮಾಡುವವರಿಗೆ ಉಳಿಗಾಲವಿಲ್ಲ. ಯಾಕೆಂದರೆ ಈ ತಪ್ಪು ಮಾಡುವವರಿಗೆ 7 ವರ್ಷ ಜೈಲು ಹಾಗೂ ಒಂದು ಕೋಟಿ ದಂಡ ವಿಧಿಸುವ ನೂತನ ಕಾನೂನನ್ನು ತರಲು ನರೇಂದ್ರ ಮೋದಿ ಸರ್ಕಾರ ಮುಂದಾಗಿದೆ.
ಅಲ್ಲದೇ ಭಾರತದ ಯಾವುದೇ ಭಾಗದ ಭೂಪ್ರದೇಶವನ್ನು ಸ್ಪೇಸ್, ಏರಿಯಲ್, ಇಂಟರ್ನೆಟ್ ವೇದಿಕೆಯಲ್ಲಿ ತೋರಿಸಬೇಕೆಂದಾದರೆ ಸರ್ಕಾರದಿಂದ ಅನುಮತಿ, ಪರವಾನಗಿ ಪಡೆದುಕೊಳ್ಳುವುದು ಅತ್ಯಗತ್ಯ.
ಅಲ್ಲದೇ ಕೇವಲ ಕಲ್ಪನೆಯ ಆಧಾರದಲ್ಲಿ ಭಾರತದ ಭೂಪಟವನ್ನು ಬರೆದು ಎಡವಟ್ಟು ಮಾಡಿಕೊಳ್ಳುವ ಸಂಸ್ಥೆ, ವ್ಯಕ್ತಿಗಳು ಒಂದು ಕೋಟಿ ದಂಡ ಕಟ್ಟಲು ಮತ್ತು 7 ವರ್ಷ ಜೈಲು ಪಾಲಾಗಲು ಸಿದ್ಧರಿರಬೇಕಾಗಿದೆ.
ಇದಕ್ಕಾಗಿ ಜಿಯೋಸ್ಪಾಶಿಯಲ್ ಇನ್ಫಾರ್ಮೆಶನ್ ರೆಗ್ಯುಲೇಶನ್ ಬಿಲ್ ತರಲು ಕೇಂದ್ರ ಮುಂದಾಗಿದೆ. ಇದರ ಅನ್ವಯ ಗೂಗಲ್ ಸೇರಿದಂತೆ ಇನ್ನಿತರ ಯಾವುದೇ ಆನ್ಲೈನ್ ವೇದಿಕೆಗಳು ಭಾರತದ ಭೂಪಟವನ್ನು ತೋರಿಸಬೇಕೆಂದದರೆ ಮೊದಲು ಸರ್ಕಾರದ ಅನುಮತಿಯನ್ನು ಪಡೆದುಕೊಳ್ಳಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.