ಅಬುಧಾಭಿ : ವಿಶ್ವದ ಅತಿ ಎತ್ತರದ ಗಗನ ಚುಂಬಿ ಕಟ್ಟಡ ಬುರ್ಜ್ ಖಲೀಫಾ ಮತ್ತು ಪಾಲ್ಮ್ ದ್ವೀಪಗಳನ್ನು ನಿರ್ಮಿಸಿರುವ ಅರಬ್ಬರು ಇದೀಗ ಹೊಸದೊಂದು ಅಚ್ಚರಿಯ ಪ್ರಯತ್ನವನ್ನು ಮಾಡಲು ಹೊರಟಿದ್ದಾರೆ.
ಅದೇನೆಂದರೆ ಮಳೆಗಾಗಿ ಕೃತಕ ಪರ್ವತ ! ಇದು ಕೇಳಲು ಅಚ್ಚರಿಯಾದರೂ, ಯುಎಇ ಮರುಭೂಮಿಯಲ್ಲಿ ಇಂಥಹದೊಂದು ಕೃತಕ ಪರ್ವತವನ್ನು ನಿರ್ಮಿಸಿ ಮಳೆಯನ್ನು ಧರೆಗಿಳಿಸುವ ಪ್ರಯತ್ನಕ್ಕೆ ಅರಬ್ಬರು ಕೈ ಹಾಕುತ್ತಿದ್ದಾರೆ.
ಈ ಮೊದಲು ಮೋಡಬಿತ್ತನೆಗಾಗಿ ಯುಎಇಯಲ್ಲಿ ಬಹಳಷ್ಟು ಪ್ರಯತ್ನಗಳು ನಡೆದಿದ್ದರೂ ಅದು ಹೇಳುವಷ್ಟರ ಮಟ್ಟಿಗೆ ಸಫಲತೆಯನ್ನು ಕೊಟ್ಟಿರಲಿಲ್ಲ.
ಇದೀಗ ಯುಎಇ ಯ ಓಚಿಣioಟಿಚಿಟ ಅeಟಿಣeಡಿ ಜಿoಡಿ ಒeಣeoಡಿoಟogಥಿ ಚಿಟಿಜ Seismoಟogಥಿ (ಓಅಒS) ಯು ಅಮೇರಿಕಾದ Uಟಿiveಡಿsiಣಥಿ ಅoಡಿಠಿoಡಿಚಿಣioಟಿ ಜಿoಡಿ ಂಣmosಠಿheಡಿiಛಿ ಖeseಚಿಡಿಛಿh (Uಅಂಖ) ನೊಂದಿಗೆ ಈ ಮಹತ್ವಾಕಾಂಕ್ಷೆಯ ಯೋಜನೆಗೆ ಸಿದ್ಧವಾಗುತ್ತಿದೆ ಎಂದು ಅರೇಬಿಯನ್ ಬಿಸಿನೆಸ್ ವರದಿ ಮಾಡಿದೆ.
ವರದಿ ಪ್ರಕಾರ ಈಗಾಗಲೇ ಯುಎಇ ಸರ್ಕಾರ ೪೦೦,೦೦೦ ಡಾಲರ್ಗಳನ್ನು ಈ ಯೋಜನೆಗೆ ನಿಯೋಜಿಸಿದ್ದು, ಮೋಡ ಬಿತ್ತನೆಗಿಂತಲೂ ಕೃತಕ ಪರ್ವತ ನಿರ್ಮಾಣದಿಂದ ಮಳೆ ಬರುವುದು ಸಾಧ್ಯವೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲಿದೆ. ತದನಂತರ ನಿರ್ಮಾಣಕ್ಕೆ ಕೈ ಹಾಕಲಿದೆ ಎನ್ನಲಾಗಿದೆ.
ಯುಎಇ ಮರುಭೂಮಿಯಾಗಿದ್ದು, ಇಲ್ಲಿನ ಭೂಮಿ ಸಮತಟ್ಟಾಗಿರುವ ಕಾರಣ ಇಲ್ಲಿ ಮಳೆ ಪ್ರಮಾಣ ತೀರಾ ಕಡಿಮೆ ಇರುತ್ತದೆ. ಉಷ್ಣಾಂಶ ಕೂಡಾ ಹೆಚ್ಚಾಗುತ್ತಿರುತ್ತದೆ. ಇಲ್ಲಿ ಕೃತಕ ಪರ್ವತ ನಿರ್ಮಿಸಿದರೆ ಗಾಳಿ ಮೇಲಕ್ಕೆ ಬಂದು, ಮೋಡಗಳು ಸೃಷ್ಟಿಯಾಗುತ್ತವೆ. ಆ ನಂತರ ಮೋಡಬಿತ್ತನೆ ಮಾಡುವ ಮೂಲಕ ಮಳೆಯನ್ನು ಭೂಮಿಗೆ ತರಿಸಬಹುದು ಎಂಬುದಾಗಿದೆ.
ಅರಣ್ಯ, ಬೆಟ್ಟ-ಗುಡ್ಡ ಇರುವ ಭಾಗದಲ್ಲಿ ಪರಿಸರವನ್ನು ಕಡಿದು ರಿಯಲ್ ಎಸ್ಟೇಟ್, ಗಣಿಗಾರಿಕೆ, ಆಧುನೀಕರಣ, ಅಭಿವೃದ್ಧಿ ಹೆಸರಿನಲ್ಲಿ ಪರಿಸರವನ್ನು ಹಾಳು ಮಾಡುತ್ತಿರುವ ಪ್ರದೇಶಗಳೇ ಇಂದು ಹೆಚ್ಚಾಗಿದ್ದು ಎಲ್ಲೆಲ್ಲೂ ನೀರು, ಮಳೆ ಇಲ್ಲದೆ ಬರಗಾಲ ಹಲವೆಡೆ ಬಂದಿದೆ. ಆದರೆ ಮರಭೂಮಿಯಾಗಿರುವ ಯುಎಇ ಅವರು ಅರಣ್ಯ, ಬೆಟ್ಟ ಗುಡ್ಡಗಳ ಮಹತ್ವವನ್ನು ಅರಿತು ಕೃತಕವಾಗಿಯಾದರೂ ಪರ್ವತವನ್ನು ನಿರ್ಮಿಸಿ ಮಳೆಯನ್ನು ಧರೆಗಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇನ್ನಾದರೂ ಪರಿಸರ ನಾಶ ಮಾಡುವವರು ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಎಲ್ಲೆಡೆ ನೀರು ಗಾಳಿಗಾಗಿ ಹಾಹಾಕಾರ ಸೃಷ್ಟಿಯಾಗಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.