ಬೆಂಗಳೂರು : ಸಂಸತ್ ಕಲಾಪದ ಕುರಿತು ಮಾಜಿ ಸಂಸದ ವಿಶ್ವನಾಥ್ ಅವರು ಬರೆದಿರುವ ‘ದಿ ಟಾಕಿಂಗ್ ಶಾಪ್’ ಎಂಬ ಪುಸ್ತಕವು ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು (ಮೇ 5) ರಂದು ಬಿಡುಗಡೆಗೊಳ್ಳಲಿದ್ದು, ಅದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಗದ್ದಲ ಆರಂಭವಾಗಿದೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಸಂಸತ್ ಕಲಾಪದ ಕುರಿತು ‘ದಿ ಟಾಕಿಂಗ್ ಶಾಪ್’ ಎಂಬ ಪುಸ್ತಕವನ್ನು ಮಾಜಿ ಸಂಸದ ವಿಶ್ವನಾಥ್ ಬರೆದಿದ್ದು, ಇಂದು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಎಸ್.ಎಂ.ಕೃಷ್ಣ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದು ಅವರ ಆಗಮನಕ್ಕಾಗಿ ಕಾಯಲಾಗುತ್ತಿತ್ತು. ಕುರುಬ ಸಮುದಾಯದ ಮುಖಂಡ ಶಿವರಾಮ್ ಅವರು ಮಾಜಿ ಸಂಸದ ವಿಶ್ವನಾಥ್ ಅವರೊಂದಿಗೆ ಮಾತನಾಡುತ್ತಿದ್ದರು. ಮಾತುಕತೆಯ ನಂತರ ವಿಶ್ವನಾಥ್ ವಿರುದ್ಧ ಶಿವರಾಮ್ ಧಿಕ್ಕಾರ ಕೂಗಿದ್ದಾರೆ.
ಕುರುಬ ಸಮುದಾಯಕ್ಕೆ ಮಾಜಿ ಸಂಸದ ವಿಶ್ವನಾಥ್ ಅಧಿಕಾರದಲ್ಲಿದ್ದಾಗ ಎನ್ನನ್ನೂ ಮಾಡಿಲ್ಲ. ಈಗ ಅಧಿಕಾರ ಹಿಡಿಯಲು ಪುಸ್ತಕ ಬಿಡುಗಡೆಯಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದಾರೆ. ಸಮಾಜದ್ರೋಹಿ ವಿಶ್ವನಾಥ್ಗೆ ಧಿಕ್ಕಾರ, 420 ವಿಶ್ವನಾಥ್ಗೆ ಧಿಕ್ಕಾರ ಎಂಬ ಘೋಷಣೆಗಳನ್ನು ಶಿವರಾಮ್ ಕೂಗಿದ್ದಾರೆ. ಇದರಿಂದ ಆಕ್ರೋಶಿತರಾದ ವಿಶ್ವನಾಥ್ ಬೆಂಬಲಿಗರು ರವೀಂದ್ರ ಕಲಾಕ್ಷೇತ್ರದಿಂದ ಶಿವರಾಮ್ ಅವರನ್ನು ಹೊರಹಾಕಿದ್ದಾರೆ.
ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದುದರಿಂದ ಪೊಲೀಸ್ ಭದ್ರತೆ ನೀಡಬೇಕಿತ್ತು. ಈ ಸಂದರ್ಭ ಯಾವುದೇ ಪೊಲೀಸ್ ಭದ್ರತೆಯನ್ನು ಕಾರ್ಯಕ್ರಮಕ್ಕೆ ನೀಡದಿರುವುದೇ ಇಂತಹ ಫಟನೆಗೆ ಕಾರಣ ಎನ್ನಲಾಗುತ್ತಿದೆ.
ಮಾಜಿ ಸಂಸದ ವಿಶ್ವನಾಥ್ ಸಮಾನಮಸಕ್ಕ ಶಾಸಕರೊಂದಿಗೆ ಗುರುತಿಸಿಕೊಂಡಿದ್ದು, ಸಚಿವ ಸಂಪುಟ ಮತ್ತು ಮುಖ್ಯಮಂತ್ರಿಗಳ ಬದಲಾವಣೆಗೆ ದನಿಗೂಡಿಸಿದ್ದರು. ಆದುದರಿಂದ ಇದರಲ್ಲಿ ರಾಜಕೀಯವೂ ಅಡಗಿರಬಹುದು ಎನ್ನಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.