ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಅವರ ನೂತನ ಸಿನಿಮಾ ’ಕಬಾಲಿ’ಯ ಟೀಸರ್ ಇಂಟರ್ನೆಟ್, ಸಿನಿಮಾ ವಲಯದಲ್ಲಿ ಮಾತ್ರ ಬಝ್ ಕ್ರಿಯೇಟ್ ಮಾಡುತ್ತಿಲ್ಲ. ಬದಲಾಗಿ ರಾಜಕೀಯ ವಲಯದಲ್ಲೂ ಭಾರೀ ಸುದ್ದಿ ಮಾಡುತ್ತಿದೆ.
ಕಬಾಲಿ ಟೀಸರ್ಗೆ ಯೂಟ್ಯೂಬ್ನಲ್ಲಿ ಮಿಲಿಯನ್ ಗಟ್ಟಲೆ ಹಿಟ್ಸ್ಗಳು ದೊರೆತಿವೆ, ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್ ಆಗಿದೆ.
ಇದೀಗ ಇದೇ ಟೀಸರ್ನ್ನು ಬಳಸಿ ಜಯಲಲಿತಾ ಮತ್ತು ಅವರ ಎಐಎಡಿಎಂಕೆ ಪಕ್ಷವನ್ನು ಟಾರ್ಗೆಟ್ ಮಾಡಲು ಕರುಣಾನಿಧಿ ಅವರ ಡಿಎಂಕೆ ಪಕ್ಷ ಮುಂದಾಗಿದೆ.
ಟೀಸರ್ನ ವಾಯ್ಸ್ ಬದಲಾಯಿಸಿ ಎಐಎಡಿಎಂಕೆಯನ್ನು ವಿಲನ್ ಆಗಿ ತೋರಿಸಲಾಗಿದೆ. ಇದರಲ್ಲಿ ರಜನೀಕಾಂತ್ ಅವರು ನೆರೆ ಪರಿಸ್ಥಿತಿಯನ್ನು ಸಂಭಾಳಿಸಿದ ರೀತಿಗೆ ಜಯಲಲಿತಾ ಪಕ್ಷವನ್ನು ಟೀಕಿಸುವಂತೆ ಬಿಂಬಿಸಲಾಗಿದೆ.
ಕರುಣಾನಿಧಿ, ಎಂಕೆ ಸ್ಟಾಲಿನ್ ಅವರೊಂದಿಗೆ ರಜನೀಕಾಂತ್ ಇರುವಂತೆ ತೋರಿಸಲಾಗಿದೆ.
ಡಿಎಂಕೆಯ ಈ ಕ್ರಮಕ್ಕೆ ಭಾರೀ ಆಕ್ರೋಶಗಳೂ ವ್ಯಕ್ತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.