ನವದೆಹಲಿ: ಸಂಸದರ ವೇತನವನ್ನು ಹೆಚ್ಚಳ ಮಾಡುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ತೀವ್ರ ವಿರೋಧವಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಒಂದು ವೇಳೆ ಇದು ನಿಜವೇ ಆದರೆ ಸಂಸದರ ಬೇಡಿಕೆಗೆ ತೀವ್ರ ಹಿನ್ನಡೆಯಾದಂತಾಗುತ್ತದೆ.
ತಮ್ಮ ವೇತನದಲ್ಲಿ ಶೇ.100ರಷ್ಟು ಹೆಚ್ಚಳ ಬಯಸುತ್ತಿರುವ ಸಂಸದರು, ಇದಕ್ಕಾಗಿ ಪ್ರಧಾನಿ ಸಚಿವಾಲಯದ ಅನುಮೋದನೆಗೆ ಎದುರು ನೋಡುತ್ತಿದ್ದಾರೆ.
ಈಗಾಗಲೇ ಸಂಸದೀಯ ಸಮಿತಿ ವೇತನ ಹೆಚ್ಚಳದ ಬಗ್ಗೆ ಶಿಫಾರಸ್ಸುನ್ನು ಮಾಡಿದ್ದು, ಪ್ರಧಾನಿ ಸಚಿವಾಲಯದ ಅನುಮೋದನೆಗಾಗಿ ಎದುರು ನೊಡುತ್ತಿದೆ. ಆದರೀಗ ಸ್ವತಃ ಪ್ರಧಾನಿಯೇ ವೇತನ ಹೆಚ್ಚಳದ ವಿರುದ್ಧವಾಗಿದ್ದಾರೆ ಎಂಬುದು ಸಂಸದರಿಗೆ ತೀವ್ರ ನಿರಾಸೆಯನ್ನು ತಂದಿದೆ.
ಒಂದು ವೇಳೆ ಪ್ರಧಾನಿ ಸಚಿವಾಲಯ ಅನುಮೋದನೆ ನೀಡಿದರೆ ಸಂಸದರ ವೇತನ ತಿಂಗಳಿಗೆ 50 ಸಾವಿರದಿಂದ 1 ಲಕ್ಷಕ್ಕೆ ಏರಿಕೆಯಾಗಲಿದೆ. ಇದಕ್ಕಾಗಿ ವರ್ಷಕ್ಕೆ 250 ಕೋಟಿಯನ್ನು ಸರ್ಕಾರ ಎತ್ತಿಡಬೇಕಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.