ವಾಷಿಂಗ್ಟನ್: F-16 ಫೈಟರ್ ಜೆಟ್ ಖರೀದಿಯಲ್ಲಿ ಪಾಕಿಸ್ಥಾನಕ್ಕೆ ಯಾವುದೇ ಸಬ್ಸಿಡಿಗಳನ್ನು ನೀಡಲು ಬರಾಕ್ ಒಬಾಮ ಆಡಳಿತ ನಿರಾಕರಿಸಿದ್ದು, ಪೂರ್ಣ ಮರುಪಾವತಿ ಮಾಡುವಂತೆ ಸೂಚನೆ ನೀಡಿದೆ.
ಅಲ್ಲದೇ ತನ್ನ ರಾಷ್ಟ್ರೀಯ ಫಂಡ್ಗಳನ್ನು ಬಳಸಿ ಈ ಫೈಟರ್ ಜೆಟ್ಗಳನ್ನು ಖರೀದಿಸುವಂತೆ ಅದು ಪಾಕಿಸ್ಥಾನಕ್ಕೆ ಸಲಹೆ ನೀಡಿದೆ.
ಪಾಕಿಸ್ಥಾನಕ್ಕೆ ಯುದ್ಧ ವಿಮಾನ ನೀಡುವುದಕ್ಕೆ ಅಮೆರಿಕಾದ ಕೆಲ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಪಾಕಿಸ್ಥಾನದ ಪಾಲಿಗೆ ಒಬಾಮ ಆಡಳಿತದ ಈ ನಿರ್ಧಾರ ದೊಡ್ಡ ಹಿನ್ನಡೆಯನ್ನು ತಂದಿದೆ.
ಈ ಫೈಟರ್ ಜೆಟ್ಗಳನ್ನು ಪಾಕಿಸ್ಥಾನ ತನ್ನ ಶತ್ರು ರಾಷ್ಟ್ರ ಭಾರತದ ವಿರುದ್ಧ ಬಳಕೆ ಮಾಡುವ ಆತಂಕವನ್ನು ಹಲವಾರು ಮಂದಿ ಅಮೆರಿಕನ್ನರು ವ್ಯಕ್ತಪಡಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.