×
Home About Us Advertise With s Contact Us

ನೌಕಾಸೇನೆಯ ಏರ್‌ಕ್ರಾಫ್ಟ್ ಪತನ: ಇಬ್ಬರು ಕಾಣೆ

aircraftಪಣಜಿ: ಭಾರತೀಯ ನೌಕಾಸೇನೆಗೆ ಸೇರಿದ ಸರ್ವಿಲೆನ್ಸ್ ಏರ್‌ಕ್ರಾಫ್ಟ್ (ಕಣ್ಗಾವಲು ವಿಮಾನ) ನೈಋತ್ಯ ಗೋವಾದ ಸುಮಾರು 25 ನಾಟಿಕಲ್ ಮೈಲ್ಸ್ ದೂರದಲ್ಲಿ ಪತನಗೊಂಡಿದೆ. ಅದರೊಳಗಿದ್ದ ಇಬ್ಬರು ನೌಕಾ ಅಧಿಕಾರಿಗಳು ಕಾಣೆಯಾಗಿದ್ದಾರೆ.

ನಿತ್ಯದ ತರಬೇತಿ ಹಾರಾಟ ನಡೆಸುತ್ತಿದ್ದ ಈ ಡೊರ್ನಿಯರ್ ಕಡಲ ಕಣ್ಗಾವಲು ವಿಮಾನ ಮಂಗಳವಾರ ರಾತ್ರಿ ಸುಮಾರು 11ಗಂಟೆಗೆ ಪತನಗೊಂಡಿದೆ. ಇದರಲ್ಲಿದ್ದ ಇಬ್ಬರು ಸಿಬ್ಬಂದಿಗಳು ಇದುವರೆಗೆ ಪತ್ತೆಯಾಗಿಲ್ಲ. ಒಬ್ಬನನ್ನು ರಕ್ಷಿಸಲಾಗಿದೆ ಎಂದು ನೌಕಾ ಮೂಲಗಳು ತಿಳಿಸಿವೆ.

ರಕ್ಷಣಾಕಾರ್ಯ ನಡೆಯುತ್ತಿದ್ದು ಒಬ್ಬ ಪೈಲೆಟ್ ಮತ್ತು ಅಬ್‌ಸರ್ವರ್‌ಗಾಗಿ ಶೋಧನೆ ನಡೆಸಲಾಗುತ್ತಿದೆ.

 

Recent News

Back To Top
error: Content is protected !!