ನವದೆಹಲಿ : ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವಿದ್ಯಾರ್ಥಿ ಸಂಘಟನೆಯ ಸ್ಥಾಪಕ ಮತ್ತು ಭಾರತೀಯ ಜನ ಸಂಘ (ಬಿಜೆಎಸ್)ನ ಮಾಜಿ ಅಧ್ಯಕ್ಷ ಬಲರಾಜ್ ಮಧೋಕ್ ವಿಧಿವಶರಾಗಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಸೆಂಟ್ರಲ್ ದೆಹಲಿಯ ನ್ಯೂ ರಾಜೇಂದ್ರ ನಗರದಲ್ಲಿ ಇಂದು ಬೆಳಗ್ಗೆ ಒಂಭತ್ತು ಗಂಟೆಗೆ ವಿಧಿವಶರಾಗಿದ್ದಾರೆ ಎಂದು ಆರ್.ಎಸ್.ಎಸ್.ನ ಪ್ರಮುಖರು ತಿಳಿಸಿದ್ದಾರೆ.
1920ರಲ್ಲಿ ಆಗಿನ ಭಾರತದ ಸ್ಕರ್ದು ಪ್ರಾಂತದಲ್ಲಿ ಫೆ.25 ರಂದು ಜನಿಸಿದ್ದು, 96 ವರ್ಪವಯಸ್ಸಾಗಿತ್ತು. ಎಬಿವಿಪಿ, ಬಿಜೆಎಸ್ ಮತ್ತು ಆರ್.ಎಸ್.ಎಸ್.ನ ಸಕ್ರೀಯ ಕಾರ್ಯಕರ್ತರಾಗಿದ್ದರು. ಅಲ್ಲದೇ ೧೯೬೧ರಲ್ಲಿ ಲೋಕಸಭೆಯ ಸಂಸದರಾಗಿ ಆಯ್ಕೆಯಾಗಿದ್ದರು.
ಬಲರಾಜ್ ಮಧೋಕ್ರವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಆರೋಗ್ಯ ಸಚಿವ ಹರ್ಷವರ್ಧನ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.