ಬಲಿಯಾ: ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ತನ್ನ ಲೋಕಸಭಾ ಕ್ಷೇತ್ರ ವಾರಣಾಸಿಯ ಬಲಿಯಾಗೆ ತೆರಳಿ, ಪ್ರಧಾನ್ ಮಂತ್ರಿ ಉಜ್ವಲ ಯೋಜನೆಗೆ ಚಾಲನೆ ನೀಡಿದರು.
ಪ್ರಧಾನ್ ಮಂದಿ ಉಜ್ವಲ್ ಯೋಜನೆ ಮುಂದಿನ 3 ವರ್ಷದಲ್ಲಿ ಬಡತನ ರೇಖೆಗಿಂತ ಕೆಳಗಿರುವ 5 ಕೋಟಿ ಮಹಿಳೆಯರಿಗೆ ಉಚಿತ ಎಲ್ಪಿಜಿ ಕನೆಕ್ಷನ್ ನೀಡುವ ಗುರಿಯನ್ನು ಹೊಂದಿದೆ.
ವಾರಣಾಸಿಯಲ್ಲಿ ಮೋದಿ ಹಲವಾರು ಮಹಿಳೆಯರಿಗೆ ಎಲ್ಪಿಜಿ ನೀಡುವ ಮೂಲಕ ಯೋಜನೆಗೆ ಅಧಿಕೃತ ಚಾಲನೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಈ ಬಲಿಯಾ ಭೂಮಿ ನಮಗೆ ಮಂಗಲ್ ಪಾಂಡೆಯಂತಹ ವೀರನನ್ನು ನೀಡಿದೆ. ಇಲ್ಲಿನ ಜನ ದೇಶಕ್ಕಾಗಿ ಪ್ರಾಣವನ್ನೇ ನೀಡಿದ್ದಾರೆ. ಕಾರ್ಮಿಕರ ದಿನದಂದು ನಾವಿಲ್ಲಿ ಸೇರಿದ್ದೇವೆ. ಶ್ರಮಿಕ ವರ್ಗದವರ ಪರಿಶ್ರಮಕ್ಕೆ ನನ್ನ ಅಭಿನಂದನೆ, ದೇಶದ ಪ್ರಗತಿಯಲ್ಲಿ ಅವರ ಕೊಡುಗೆ ಮಹತ್ತರವಾದುದು ಎಂದರು.
ದೇಶದ ನಂ.1 ಕಾರ್ಮಿಕನಾದ ನಾನು ಈ ದಿನ ದೇಶದ ಎಲಾ ಕಾರ್ಮಿಕ ವರ್ಗಕ್ಕೂ ಶುಭಕೋರುತ್ತೇನೆ ಎಂದರು.
ನಾವು ಶ್ರಮ ಸುವಿಧ ಪೋರ್ಟಲ್ನ್ನು ಆರಂಭವಿಸಿದ್ದೇವೆ, ಕಾರ್ಮಿಕರಿಗೆ ಗುರುತಿನ ಚೀಟಿಯನ್ನೂ ನೀಡಿದ್ದೇವೆ. ಶ್ರಮಿಕ ಬೆವರಿಗೆ ಜಗತ್ತನ್ನು ಒಂದುಗೂಡಿಸುವ ಶಕ್ತಿಯಿದೆ. ನಮ್ಮದು ಬಡವರಿಗಾಗಿ ಇರುವ ಸರ್ಕಾರ, ನಾವು ಏನೇ ಮಾಡಿದರೂ ಅದು ಬಡವರಿಗಾಗಿ. ಕಾರ್ಮಿಕ ಸಂಬಂಧಿತ ವಿಷಯಗಳ ಬಗ್ಗೆ ನಾವು ಗಮನ ಹರಿಸಿದ್ದೇವೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.