ನವದೆಹಲಿ: ಕೆಲವು ದಿನಗಳಿಂದ ರಾಜಕೀಯ ವಲಯದಲ್ಲಿ ಮೋದಿಯವರ ಶೈಕ್ಷಣಿಕ ಅರ್ಹತೆಯ ಬಗೆಗೆ ಹಲವಾರು ವದಂತಿಗಳು ಹರಡುತ್ತಿವೆ. ಆದರೀಗ ಎಲ್ಲಾ ವದಂತಿಗಳಿಗೂ ತೆರೆ ಬಿದ್ದಿದೆ.
ಮೋದಿಯವರು ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಮಾಡಿದ್ದು ಅದರಲ್ಲಿ ಫಸ್ಟ್ ಕ್ಲಾಸ್ ಅಂಕವನ್ನು ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.
ಗುಜರಾತ್ ವಿಶ್ವವಿದ್ಯಾಲಯದ ಮಾಹಿತಿ ಪ್ರಕಾರ ಮೋದಿ ಬಾಹ್ಯ ವಿದ್ಯಾರ್ಥಿಯಾಗಿದ್ದು, 1983ರಲ್ಲಿ ಶೇ.62.3ರಷ್ಟು ಅಂಕಗಳೊಂದಿಗೆ ಪದವಿ ಪೂರೈಸಿದ್ದಾರೆ. ಯುರೋಪಿಯನ್ ಪಾಲಿಟಿಕ್ಸ್, ಇಂಡಿಯನ್ ಪೊಲಿಟಿಕಲ್ ಅನಾಲಿಸಿಸ್, ಸೈಕಾಲಜಿ ಆಫ್ ಪಾಲಿಟಿಕ್ಸ್ ಮೋದಿ ಆಯ್ಕೆ ಮಾಡಿಕೊಂಡ ವಿಷಯಗಳಾಗಿದ್ದವು.
ಅವರ ಶೈಕ್ಷಣಿಕ ಅರ್ಹತೆಯ ಬಗ್ಗೆ ಹಲವಾರು ಮಂದಿ ಪ್ರಶ್ನೆಗಳನ್ನು ಕೇಳಿದ್ದರು, ಅದಕ್ಕೆಲ್ಲ ಈಗ ಉತ್ತರ ದೊರೆತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.