ಡೆಹ್ರಾಡೂನ್: ಉತ್ತರಾಖಂಡದ ಕಾಡುಗಳಲ್ಲಿ ಕಾಡ್ಗಿಚ್ಚಿನ ಆತಂಕ ಹೆಚ್ಚಾಗಿದೆ. ಶುಕ್ರವಾರದಿಂದ ಅಲ್ಲಿ ಸಂಭವಿಸುತ್ತಿರುವ ಕಾಡ್ಗಿಚ್ಚಿಗೆ ಹಲವು ಹೆಕ್ಟರ್ ಅರಣ್ಯ ಪ್ರದೇಶ ಭಾಗಶಃ ಸುಟ್ಟು ಹೋಗಿದೆ.
ಕಾಡ್ಗಿಚ್ಚು ಇನ್ನಷ್ಟು ಹೆಚ್ಚಾಗುವ ಸಂಭವವಿದ್ದು, ಅಲ್ಲಿನ 1500ಗ್ರಾಮಗಳು ಅಪಾಯದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಅಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ 3 ತಂಡಗಳನ್ನು ನಿಯೋಜಿಸಿದೆ.
ವಾಯುಸೇನೆ mi-17 ಹೆಲಿಕಾಫ್ಟರ್ ಜೊತೆ 11 ಸದಸ್ಯರ ತಂಡವನ್ನು ಕಾಡ್ಗಿಚ್ಚು ನಿಯಂತ್ರಿಸುವ ಸಲುವಾಗಿ ನಿಯೋಜಿಸಿದೆ. ಬಾಧಿತ ಪ್ರದೇಶದಲ್ಲಿ ಈಗಾಗಲೇ ಕಾರ್ಯಾಚರಣೆ ನಡೆಸಿ ಪರಿಸ್ಥಿತಿಯ ನಿಯಂತ್ರಣಕ್ಕೆ ಪ್ರಯತ್ನಿಸಲಾಗುತ್ತಿದೆ.
ಈಗಾಗಲೇ ಉತ್ತರಾಖಂಡದ 50 ಕಡೆಗಳಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ನಾಳೆಯೂ ಇನ್ನಷ್ಟು ಪ್ರದೇಶಗಳು ಬೆಂಕಿಗೆ ಆಹುತಿಯಾಗುವ ಸೂಚನೆಗಳಿದ್ದು, ಮನುಷ್ಯ ಮತ್ತು ಪ್ರಾಣಿಗಳ ಜೀವಕ್ಕೆ ಕುತ್ತು ತರುತ್ತಿದೆ.
ಫೆಬ್ರವರಿಯಿಂದ ಇಲ್ಲಿಯವರೆಗೆ ಕಾಡ್ಗಿಚ್ಚಿಗೆ ಉತ್ತರಾಖಂಡದ 1900 ಹೆಕ್ಟರ್ ಅರಣ್ಯ ಪ್ರದೇಶಗಳು ಸುಟ್ಟು ಭಸ್ಮವಾಗಿದೆ ಎಂದು ವರದಿಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.