ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸೂಚನೆಯ ಮೇರೆಗೆ ಇತ್ತೀಚಿಗೆ ಬಿಜೆಪಿಯ ಡಿಜಿಟಲ್ ಸೆಲ್ ವಿಭಾಗ ತನ್ನ ಎಲ್ಲಾ ಸಂಸದರ ಸಾಮಾಜಿಕ ಜಾಲತಾಣಗಳ ಮಾಹಿತಿಯನ್ನು ಟ್ರ್ಯಾಕ್ ಮಾಡಿ ಯಾರು ಯಾರು ಎಷ್ಟೆಷ್ಟು ಸಕ್ರಿಯರಾಗಿದ್ದಾರೆ ಎಂಬ ಮಾಹಿತಿ ಕಲೆ ಹಾಕಿದೆ.
ಟ್ವಿಟರ್ ಮತ್ತು ಫೇಸ್ಬುಕ್ ಮಾಹಿತಿಯನ್ನು ಕಲೆ ಹಾಕಿ ಅದರ 6 ಪುಟಗಳ ವರದಿಯನ್ನು ಎಲ್ಲಾ ಸಂಸದರಿಗೂ ರವಾನಿಸಲಾಗಿದೆ.
ಸಂಸದರು ಮಾಡಿದ ಟ್ವಿಟ್, ರೀ-ಟ್ವಿಟ್ಗಳ ಸಂಖ್ಯೆ, ಅವರ ಸ್ಟೇಟಸ್ ಹೀಗೆ ಎಲ್ಲದರ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ. ಇವರು ಸರ್ಕಾರದ ಕಾರ್ಯವನ್ನು ಪ್ರಚಾರ ಮಾಡುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆಯೂ ತಿಳಿದುಕೊಳ್ಳಲಾಗಿದೆ.
5 ಮಿಲಿಯನ್ ಟ್ವಿಟರ್ ಫಾಲೋವರ್ಗಳನ್ನು ಹೊಂದಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಈ ಲಿಸ್ಟ್ನಲ್ಲಿ ಸ್ಟಾರ್ ಪರ್ಫಾರ್ಮರ್ ಆಗಿ ಹೊರಹೊಮ್ಮಿದ್ದಾರೆ.
ಕೆಲ ಸಂಸದರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು ಸರ್ಕಾರದ ಕಾರ್ಯವನ್ನು ಪ್ರಚಾರ ಮಾಡುತ್ತಲೇ ಇದ್ದಾರೆ, ಆದರೆ ಕೆಲವರು ಅತೀ ಹಿಂದುಳಿದಿದ್ದಾರೆ ಎಂದು ಡಿಜಿಟಲ್ ಸೆಲ್ ವಿಭಾಗ ತಿಳಿಸಿದೆ.
ಸುಷ್ಮಾ, ವಿಕೆ ಸಿಂಗ್, ರಾಜವರ್ಧನ್ ಸಿಂಗ್ ರಾಥೋಡ್, ಮಹೇಶ್ ಶರ್ಮಾ ಅವರು ಸಕ್ರಿಯರಾಗಿದ್ದು, ಇದಕ್ಕಾಗಿ ಶ್ಲಾಘನೆಯನ್ನು ಗಳಿಸಿದ್ದಾರೆ.
ಉತ್ತರಪ್ರದೇಶದ ಬಿಜೆಪಿ ಅಧ್ಯಕ್ಷ ಕೇಶವ್ ಪ್ರಸಾದ್ ಮೌರ್ಯ ಈ ಪಟ್ಟಿಯಲ್ಲಿ ಅತೀ ಹಿಂದುಳಿದವರು ಎಂದು ಗುರುತಿಸಿಕೊಂಡಿದ್ದಾರೆ. ಇಲ್ಲಿನ 71 ಎಂಪಿಗಳ ಪೈಕಿ 43ಮಂದಿ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಸಕ್ರಿಯರಾಗಿಲ್ಲ ಎಂದು ವರದಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.