ಢಾಕಾ: ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಹಿಂದೂಗಳ ಪಾಲಿಗೆ ಅದು ನರಕವಾಗಿ ಪರಿವರ್ತನೆಯಾಗುತ್ತಿದೆ.
ಇತ್ತೀಚಿಗಷ್ಟೇ ಹಿಂದೂ ಅರ್ಚಕರೊಬ್ಬರನ್ನು ಹತ್ಯೆ ಮಾಡಲಾಗಿತ್ತು. ಬಳಿಕ ಇಸ್ಲಾಂ ವಿರುದ್ಧ ಮಾತನಾಡಿದರೆಂದು ಇಬ್ಬರು ಶಿಕ್ಷಕರನ್ನು ಜೈಲಿಗಟ್ಟಲಾಗಿತ್ತು. ಇದೀಗ ಹಿಂದೂ ಟೈಲರ್ ಒಬ್ಬ ಪ್ರವಾದಿ ವಿರುದ್ಧ ಮಾತನಾಡಿದ ಎಂದು ಆರೋಪಿಸಿ ಆತನನ್ನು ಹತ್ಯೆ ಮಾಡಲಾಗಿದೆ.
ತಂಗೈಲ್ ಜಿಲ್ಲೆಯ ನಿಖಿಲ್ ಚಂದ್ರ ಜರೊದರ್ ಎಂಬ ೫೦ ವರ್ಷದ ಟೈಲರ್ ಹತ್ಯೆಗಿಡಾದ ದುರ್ದೈವಿ, ಶನಿವಾರ ಬೈಕ್ನಲ್ಲಿ ಬಂದು ಇವರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಅವರ ಕುತ್ತಿಗೆಯನ್ನು ಸೀಳಿ ಕೊಲೆ ಮಾಡಿದ್ದಾರೆ. ಬಳಿಕ ತಕ್ಷಣವೇ ಅಲ್ಲಿಂದ ಪರಾರಿಯಾಗಿದ್ದಾರೆ. ಈ ವೇಳೆ ಕಪ್ಪು ಬ್ಯಾಗನ್ನು ಸ್ಥಳದಲ್ಲಿ ಇಟ್ಟಿದ್ದು ಅದರಲ್ಲಿ ೩-೪ ಬಾಂಬ್ನಂತಹ ವಸ್ತುಗಳು ಪತ್ತೆಯಾಗಿವೆ.
2012ರಲ್ಲಿ ನಿಖಿಲ್ ವಿರುದ್ಧ ಪ್ರವಾದಿ ಮಹಮ್ಮದರಿಗೆ ಅವಮಾನ ಮಾಡಿದ ಪ್ರಕರಣ ದಾಖಲಾಗಿತ್ತು, ಅದೇ ದ್ವೇಷದಿಂದ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಾಂಗ್ಲಾದಲ್ಲಿ ಪ್ರತಿನಿತ್ಯ ಜಾತ್ಯಾತೀತ ಹೋರಾಟಗಾರರ, ಪತ್ರಕರ್ತರ, ಹಿಂದೂಗಳ ಕೊಲೆಯಾಗುತ್ತಿದೆ. ಸಲಿಂಗ ಪರ ಹೋರಾಟಗಾರರೊಬ್ಬರನ್ನು ಇತ್ತೀಚಿಗೆ ಢಾಕಾದಲ್ಲಿ ಹತ್ಯೆ ಮಾಡಲಾಗಿತ್ತು. ಇದರ ಹೊಣೆಯನ್ನು ಇಸಿಸ್ ಹೊತ್ತುಕೊಂಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.