ಪಾಟ್ನಾ: 2019ರ ಚುನಾವಣೆಯಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಪ್ರಧಾನಿಯಾಗುತ್ತಾರೆ ಎಂಬ ಮಾತನ್ನು ಕೇಂದ್ರ ಸಚಿವ ರಾಮ್ ವಿಲಾಸ್ ಪಸ್ವಾನ್ ವ್ಯಂಗ್ಯವಾಡಿದ್ದು, ಇನ್ನು 15 ವರ್ಷ ಆ ಹುದ್ದೆ ಖಾಲಿಯಾಗಿಲ್ಲ ಎಂದಿದ್ದಾರೆ.
ಪ್ರಧಾನಿ ಹುದ್ದೆ ಖಾಲಿಯಾದಾಗ ಮಾತ್ರ ನಿತೀಶ್ ಆ ಹುದ್ದೆಗೆ ಆಯ್ಕೆಯಾಗಲು ಸಾಧ್ಯ. ಆದರೆ ಆ ಹುದ್ದೆ ಖಾಲಿಯಿಲ್ಲ, 15 ವರ್ಷಕ್ಕೆ ಅದು ಭರ್ತಿಯಾಗಿದೆ ಎಂದು ಪಾಸ್ವಾನ್ ಹೇಳಿದ್ದಾರೆ.
ನಿತೀಶ್ ಪಿಎಂ ಆಗುತ್ತಾರೆ ಎಂಬುದನ್ನು ಜೆಡಿಯು ಮುಖಂಡ ಶರದ್ ಪವರ್ ಸುಮ್ಮನೆ ಮಾತಿಗೆ ಹೇಳಿದ್ದಾರೆ ಅಷ್ಟೇ, ಅದರಲ್ಲಿ ಯಾವ ಗಂಭೀರತೆಯೂ ಇಲ್ಲ. ಲಾಲೂ ಪ್ರಸಾದ್ ಯಾದವ್ ಅವರು ನಿತೀಶ್ಗೆ ಪಿಎಂ ಆಗಲು ಬೆಂಬಲ ಘೋಷಿಸಿರುವುದರಲ್ಲೂ ಗೇಮ್ ಇದೆ ಎಂದು ಅವರು ಹೇಳಿದ್ದಾರೆ.
2019ರಲ್ಲಿ ಬಿಜೆಪಿ ಸರ್ಕಾರವನ್ನು ಕಿತ್ತೆಸೆದು ನಿತೀಶ್ ಅವರು ಪ್ರಧಾನಿಯಾಗುತ್ತಾರೆ ಎಂದು ಶರದ್ ಪವಾರ್ ಹೇಳಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.