ನವದೆಹಲಿ: ಅಂತಾರಾಷ್ಟ್ರೀಯ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳನ್ನು ಬಳಸಿ ಅನಿವಾಸಿ ಭಾರತೀಯರು ಅಥವಾ ವಿದೇಶಿಯರು ಆನ್ಲೈನ್ ಮೂಲಕ ಇನ್ನು ಮುಂದೆ ಭಾರತದಲ್ಲಿ ರೈಲ್ವೇ ಟಿಕೆಟ್ಗಳನ್ನು ಬುಕ್ ಮಾಡಬಹುದಾಗಿದೆ.
ಇದುವರೆಗೆ ಅಮೆರಿಕನ್ ಎಕ್ಸ್ಪ್ರೆಸ್ ಇಂಟರ್ನ್ಯಾಷನಲ್ ಕ್ರೆಡಿಟ್ ಕಾರ್ಡ್ ಬಳಸಿ ಮಾತ್ರ ಭಾರತದಲ್ಲಿ ವಿದೇಶಿಯರು, ಅನಿವಾಸಿ ಭಾರತೀಯರು ರೈಲ್ವೇ ಟಿಕೆಟ್ಗಳನ್ನು ಬುಕ್ ಮಾಡಬೇಕಾಗಿತ್ತು.
ಇತರ ಅಂತಾರಾಷ್ಟ್ರೀಯ ಕಾರ್ಡ್ಗಳ ಬಳಕೆಗೆ ಇದುವರೆಗೆ ಅವಕಾಶವಿರಲಿಲ್ಲ, ಆದರೆ ಇನ್ನು ಮುಂದೆ ಅವರ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಟಿಕೆಟ್ ಬುಕ್ ಮಾಡಬಹುದಾಗಿದೆ ಎಂದು ಐಆರ್ಸಿಟಿಸಿ ಸಿಎಂಡಿ ಎಕೆ ಮನೋಚ ತಿಳಿಸಿದ್ದಾರೆ.
ಎಲ್ಲಾ ಜಾಗತಿಕ ಕಾರ್ಡ್ಗಳನ್ನು ಸ್ವೀಕರಿಸುವ ಮೂಲಕ ವಿದೇಶಿ ಪ್ರವಾಸಿಗರ ಬಹುಸಮಯಗಳ ಬೇಡಿಕೆಯನ್ನು ಈಡೇರಿಸಿದಂತಾಗುತ್ತದೆ, ಈಗ ಅವರು ಇ-ಟಿಕೆಟ್ಗಳನ್ನು ಬುಕ್ ಮಾಡಲು ಸಾಧ್ಯವಾಗಲಿದೆ, ಇದಕ್ಕಾಗಿ ಏಜೆನ್ಸಿಗಳನ್ನು ಅವಲಂಭಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.