ನವದೆಹಲಿ : ರಾಜ್ಯದ ಸಂಸದರು ಸಿಎಂ ಸಿದ್ದರಾಮಯ್ಯ ವಿರುದ್ಧ ಹಿರಿಯ ಸಂಸದರಿಗೆ ಮತ್ತು ಹೈಕಮಾಂಡ್ ಆಪ್ತರಿಗೆ ದೂರನ್ನು ನೀಡಿದ್ದಾರೆ, ಇಂದರಿಂದ ಸಿಎಂ ಸಿದ್ದರಾಮಯ್ಯ ಬದಲಾವಣೆ ವಿರುದ್ಧದ ಕೂಗಿಗೆ ಶಕ್ತಿ ಬಂದಂತಾಗಿದೆ.
ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಬಂದು ಹಲವು ವರ್ಷಗಳು ಕಳೆದರೂ ಅವರು ಕಾಂಗ್ರೆಸ್ ಸಂಸ್ಕೃತಿಗೆ ಸರಿಯಾಗಿ ಒಗ್ಗಿಕೊಂಡಿಲ್ಲ. ಅಲ್ಲದೇ ಸಿಎಂ ರಾಜ್ಯದಲ್ಲಿ ಸಂಸದರ ಅಭಿಪ್ರಾಯಗಳಿಗೆ ಮನ್ನಣೆ ನೀಡುತ್ತಿಲ್ಲ. ರಾಜ್ಯದಲ್ಲಿ ಸಂಸದರನ್ನು ಕಡೆಗಣಿಸಲಾಗುತ್ತಿದೆ ಎಂದು ಅವರು ಹಿರಿಯ ಸಂಸದರುಗಳಾದ ಮಲ್ಲಿಕಾರ್ಜುನ ಖರ್ಗೆ ಮತ್ತು ವೀರಪ್ಪ ಮೊಯ್ಲಿಯವರಲ್ಲಿ ಅಳಲನ್ನು ತೋಡಿ ಕೊಂಡಿದ್ದಾರೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮತ್ತು ಹೈಕಮಾಂಡ್ ಆಗಿರುವ ಸೋನಿಯಾ ಗಾಂಧಿಯ ಆಪ್ತ ಮತ್ತು ರಾಜಕೀಯ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ಸಿಎಂ ಅನ್ನು ಬದಲಾಯಿಸಿ ಕಾಂಗ್ರೆಸ್ ಅನ್ನು ಉಳಿಸಲು ಸಂಸದರು ಕೋರಿದ್ದಾರೆ ಎಂದು ಹೇಳಲಾಗುತ್ತಿದೆ.
ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣ ನಿನ್ನೆಯೇ ದೆಹಲಿಗೆ ತಲುಪಿದ್ದು, ಖಾಸಗಿ ಹೋಟಲ್ ಒಂದರಲ್ಲಿ ವಾಸ್ತವ್ಯ ಹೂಡಿದ್ದಾರೆ. ಮಾತ್ರವಲ್ಲ ಹೈಕಮಾಂಡ್ ಭೇಟಿಗಾಗಿ ಕಾಯುತ್ತಿದ್ದು ಪಂಚರಾಜ್ಯಗಳ ಚುನಾವಣೆ ಮತ್ತು ಸಂಸತ್ ಕಲಾಪದಿಂದಾಗಿ ಭೇಟಿ ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ. ಆದರೆ ಅವರ ಆಪ್ತಮೂಲಗಳು ಇದನ್ನು ನಿರಾಕರಿಸುತ್ತಿದ್ದು , ಅವರ ಖಾಸಗಿ ಕಾರ್ಯಕ್ರಮದ ನಿಮಿತ್ತ ದೆಹಲಿ ತಲುಪಿದ್ದಾರೆ ಎನ್ನಲಾಗುತ್ತಿದೆ.
ಅದೇನೇ ಇರಲಿ ಇಷ್ಟುದಿನ ಚಿಂತೆ ಇಲ್ಲದೆ ಕಂಡಕಂಡಲಿ ನಿದ್ರಿಸುತ್ತಿರುವ ಸಿಎಂ, ಈ ವಿದ್ಯಾಮಾನಗಳಿಂದ ನಿದ್ರಿಸದಿರುವಂತಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.