ಚೆನ್ನೈ: ಇಂಡಿಯನ್ ರಿಜಿನಲ್ ನೆವಿಗೇಷನ್ ಸೆಟ್ಲೈಟ್ ಸಿಸ್ಟಮ್( ಐಆರ್ಎನ್ಎಸ್ಎಸ್)ಗೆ ಸೇರಿದ ತನ್ನ 7ನೇ ಹಾಗೂ ಕೊನೆಯ ಸೆಟ್ಲೈಟನ್ನು ಇಸ್ರೋ ಗುರುವಾರ ಯಶಸ್ವಿಯಾಗಿ ಉಡಾವಣೆಗೊಳಿಸಿದೆ.
ಶ್ರೀಹರಿ ಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಧ್ಯಾಹ್ನ 12.50 ರ ಸುಮಾರಿಗೆ ಸೆಟ್ಲೈಟನ್ನು ಉಡಾವಣೆಗೊಳಿಸಲಾಗಿದೆ.
ಈ ಸೆಟ್ಲೈಟ್ಗೆ 12 ವರ್ಷಗಳ ಬಾಳ್ವಿಕೆ ಇದ್ದು, ನೇವಿಗೇಶನ್ ಮತ್ತು ರೇಂಜಿಂಗ್ನ ಪೇಲೋಡ್ಸ್ಗಳನ್ನು ಹೊಂದಿದೆ. ನಾಗರಿಕೆ ಬಳಕೆಗೆ ಮಾತ್ರವಲ್ಲದೇ ರಕ್ಷಣಾ ವಲಯದಲ್ಲೂ ಇದನ್ನು ಬಳಸಬಹುದಾಗಿದೆ. ಇದಕ್ಕೂ ಮೊದಲು ಆರು ಇಂಡಿಯನ್ ರಿಜಿನಲ್ ನೆವಿಗೇಷನ್ ಸೆಟ್ಲೈಟ್ ಸಿಸ್ಟಮ್ನ್ನು ಉಡಾವಣೆಗೊಳಿಸಲಾಗಿದೆ.
ವಿಜ್ಞಾನಿಗಳ ಈ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದು, ವಿಜ್ಞಾನಿಗಳಿಗೂ, ದೇಶದ ಕೋಟ್ಯಾಂತರ ಜನತೆಗೂ ಈ ಯಶಸ್ವಿಯ ಶುಭ ಕಾಮನೆಗಳು, ಈ ಸಾಧನೆ ಸಾಮಾನ್ಯ ಜನರ ಜೀವನದಲ್ಲೂ ಮಹತ್ವದ ಬದಲಾವಣೆಯನ್ನು ತರಬಹುದು. ವಿಜ್ಞಾನಿಗಳ ಅವಿರತ ಶ್ರಮದಿಂದ ಇದು ಸಾಧ್ಯವಾಗಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.