ನವದೆಹಲಿ: ಭಾರತ-ಪಾಕಿಸ್ಥಾನ ನಡುವಣ ಪಂಜಾಬ್ ಅಂತಾರಾಷ್ಟ್ರೀಯ ಗಡಿರೇಖೆ ಪ್ರದೇಶದಲ್ಲಿ ಭಾರತ 12 ಲೇಝರ್ ವಾಲ್ಗಳನ್ನು ನಿರ್ಮಿಸಿದ್ದು, ಅದು ಕಾರ್ಯಾರಂಭಗೊಂಡಿದೆ. ಇದರಿಂದಾಗಿ ಗಡಿಯಲ್ಲಿ ಅಕ್ರಮವಾಗಿ ಒಳನುಸುಳುವವರಿಗೆ ಬ್ರೇಕ್ ಬೀಳಲಿದೆ.
8 ಇನ್ಫ್ರಾ ರೆಡ್ ಮತ್ತು ಲೇಝರ್ ಬೀಮ್ ಡಿಟೆಕ್ಷನ್ ಸಿಸ್ಟಮ್ಗಳನ್ನು ಅಳವಡಿಸಲಾಗಿದ್ದು, ಪಂಜಾಬ್ನ ಅತೀ ಸೂಕ್ಷ್ಮ ಗಡಿ ಪ್ರದೇಶಗಳಲ್ಲಿ ಅಳವಡಿಸಲಾಗಿದೆ. ಇನ್ನು ಕೆಲವೇ ದಿನದಲ್ಲಿ ಮತ್ತೆ ನಾಲ್ಕು ಸಿಸ್ಟಮ್ಗಳನ್ನು ಅಳವಡಿಸಲಾಗುತ್ತದೆ.
ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ, ಗುಜರಾತ್ನ ಗಡಿಭಾಗಗಳಲ್ಲೂ ಲೇಝರ್ ವಾಲ್ಗಳನ್ನು ಬಿಎಸ್ಎಫ್ ಯೋಧರು ವಾಚ್ ಮಾಡುತ್ತಿದ್ದಾರೆ.
ಅಕ್ರಮ ಒಳನುಸುಳುವಿಕೆಯನ್ನು ತಡೆಗಟಟುವ ಸಲುವಾಗಿ ಲೇಝರ್ ವಾಲ್ಗಳನ್ನು ನಿರ್ಮಿಸುವ ನಿರ್ಧಾರವನ್ನು ಬಿಎಸ್ಎಫ್ ಯೋಧರೆ ಎರಡು ವರ್ಷಗಳ ಹಿಂದೆ ತೆಗೆದುಕೊಂಡಿದ್ದರು, ಆ ಯೋಜನೆ ಇಂದು ಜಾರಿಗೆ ಬರುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.