ಫಿಲಿಡೆಲ್ಫಿಯಾ: ಅಮೆರಿಕಾದ ಅಧ್ಯಕ್ಷ ಪಟ್ಟದ ಆಕಾಂಕ್ಷಿ ಡೊನಾಲ್ಡ್ ಟ್ರಂಪ್ ಅವರು ಎಲ್ಲಾ ಐದು ರಿಪಬ್ಲಿಕನ್ ಪ್ರೈಮರೀಸ್ಗಳನ್ನು ಗೆಲ್ಲುವ ಮೂಲಕ ಈಶಾನ್ಯ ಭಾಗದಲ್ಲಿ ಹೊಸ ಅಲೆಯನ್ನು ಎಬ್ಬಿಸಿದ್ದಾರೆ. ಇವರನ್ನು ತಡೆಯಲು ಪ್ರಯತ್ನಿಸುತ್ತಿರುವ ವಿರೋಧಿಗಳಿಗೆ ಇದರಿಂದ ತೀವ್ರ ನಿರಾಸೆಯಾಗಿದೆ.
ಹಿಲರಿ ಕ್ಲಿಂಟನ್ ಅವರು ಡೆಮಾಕ್ರಾಟಿಕ್ ಕಂಟೆಟ್ಸ್ ಆದ ದೆಲವರೆ, ಮೇರಿಲ್ಯಾಂಡ್, ಪೆನ್ಸಿಲ್ವೇನಿಯಾದಲ್ಲಿ ಪ್ರಾಬಲ್ಯವನ್ನು ಸಾಧಿಸಿದ್ದಾರೆ. ಡೆಮಾಕ್ರಾಟಿಕ್ ಪಕ್ಷದ ಮಹಿಳಾ ಅಭ್ಯರ್ಥಿಯಾಗಲು ಬೇಕಾದ ಶೇ.೮೮ರಷ್ಟು ಬೆಂಬಲವನ್ನು ಆಕೆ ಈಗ ಪಡೆದುಕೊಂಡಿದ್ದಾರೆ.
ಡೊನಾಲ್ಡ್ ಟ್ರಂಪ್ ವಿವಾದಿತ ಮನುಷ್ಯನಾಗಿದ್ದು, ಮುಸ್ಲಿಮರ ವಿರುದ್ಧವಾಗಿ, ವಿವಿಧ ದೇಶಗಳ ವಿರುದ್ಧವಾಗಿ ಹೇಳಿಕೆಗಳನ್ನು ನೀಡಿ ಈಗಾಗಲೇ ಸಾಕಷ್ಟು ರಾದ್ಧಾಂತಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಆದರೆ ಈ ಮಿಲಿಯನೇರ್ಗೆ ರಿಪಬ್ಲಿಕನ್ನರ ಸಾಕ್ಷುಟ ಬೆಂಬಲವಿರುವುದರಿಂದ ಚುನಾವನೆಯಲ್ಲಿ ಬಲಿಷ್ಠ ಸ್ಪರ್ಧೆ ನೀಡುವುದು ಖಚಿತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.