ನವದೆಹಲಿ: ದೆಹಲಿ ವಿಶ್ವವಿದ್ಯಾಲಯ ಮತ್ತೆ ವಿವಾದಕ್ಕೊಳಗಾಗಿದೆ, ಅದರ ಪಠ್ಯಪುಸ್ತಕದಲ್ಲಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರನ್ನು ’ಭಯೋತ್ಪಾದಕ’ ಎಂದು ಉಲ್ಲೇಖಿಸಲಾಗಿದೆ.
’ಇಂಡಿಯಾಸ್ ಸ್ಟ್ರಗಲ್ ಫಾರ್ ಇಂಡಿಪೆಂಡೆನ್ಸ್’ ಎಂಬ ಪಾಠದಲ್ಲಿ ಈ ಭಗತ್ರನ್ನು ಉಗ್ರ ಎಂದು ಬಿಂಬಿಸಿದ್ದು ಮಾತ್ರವಲ್ಲ, ಚಿತ್ತಗಾಂಗ್ ಚಳುವಳಿಯನ್ನು ಭಯೋತ್ಪಾದನಾ ಕೃತ್ಯ ಎಂದೂ ಹೇಳಲಾಗಿದೆ. ಸೌಂಡರ್ನನ್ನು ದ್ವೇಷದಿಂದ ಕೊಂದಿದ್ದೂ ಈ ಉಗ್ರ ಕೃತ್ಯ ಎಂದು ಹೇಳಲಾಗಿದೆ.
ಭಗತ್, ಚಂದ್ರಶೇಖರ್ ಆಜಾದ್, ಸೂರ್ಯಸೇನ್ ಅವರನ್ನೂ ಕ್ರಾಂತಿಕಾರಿ ಉಗ್ರರು ಎಂದು ಉಲ್ಲೇಖಿಸಿದೆ.
ಈ ಪ್ರಮಾದದ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಹಲವಾರು ಮತ್ತೆ ಇತಿಹಾಸತಜ್ಞರು, ಹೋರಾಟಗಾರರು ಮುಂದೆ ಬಂದು ಆ ಪಠ್ಯವನ್ನು ತೆಗೆದು ಹಾಕುವಂತೆ ಆಗ್ರಹಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.