ನವದೆಹಲಿ: ಅಫ್ಜಲ್ ಗುರು ಪರವಾದ ಘೋಷಣೆಗಳನ್ನು ಕೂಗಿದ ಜೆಎನ್ಯು ವಿದ್ಯಾರ್ಥಿ ಉಮರ್ ಖಲೀದ್ನನ್ನು ವಿಶ್ವವಿದ್ಯಾಲಯ ಒಂದು ಸೆಮಿಸ್ಟರ್ಗಳ ಅವಧಿಗೆ ಅಮಾನತುಗೊಳಿಸಿದೆ, ಮತ್ತೋರ್ವ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ಗೆ 10 ಸಾವಿರ ರೂಪಾಯಿ ದಂಡ ವಿಧಿಸಿದೆ.
ಫೆ.9ರ ಅಫ್ಜಲ್ ಗುರು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾನಿಲಯ ಶಿಸ್ತು ನಿಯಮಗಳನ್ನು ಮುರಿದ ಆರೋಪಕ್ಕೆ ಸಂಬಂಧಿಸಿದಂತೆ ಕನ್ಹಯ್ಯನಿಗೆ 10 ಸಾವಿರ ದಂಡ ವಿಧಿಸಲಾಗಿದೆ. ಉಮರ್ ಖಲೀದ್ಗೆ ಈ ಮೊದಲೇ 20 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
ಇನ್ನೋರ್ವ ಅಶುತೋಷ್ಗೆ ಯೂನಿವರ್ಸಿಟಿ ಹಾಸ್ಟೆಲ್ಗೆ ಒಂದು ವರ್ಷ ಬರದಂತೆ ಹಾಗೂ 20 ಸಾವಿರ ದಂಡ ಹಾಕಲಾಗಿದೆ.
ಉಮರ್ ಮತ್ತು ಕನ್ಹಯ್ಯ ಇಬ್ಬರೂ ಜೆಎನ್ಯುನ ಸಂಶೋಧನಾ ವಿದ್ಯಾರ್ಥಿಗಳಾಗಿದ್ದು, ಎಡಪಂಥೀಯ ಹೋರಾಟದಲ್ಲಿ ಸಕ್ರಿಯರಾಗಿದ್ದಾರೆ.
ಅನಿರ್ಬನ್ ಭಟ್ಟಾಚಾರ್ಯ ಮತ್ತು ಮುಜೀಬ್ ಗಟ್ಟೋ ಎಂಬುವವರಿಗೆ ಎರಡು ಸೆಮಿಸ್ಟರ್ಗಳ ಕಾಲ ಅಮಾನತು ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.