ಬೆಂಗಳೂರು : ಕಳೆದ 16 ದಿನಗಳಿಂದ ಪಿ.ಯು. ಮೌಲ್ಯಮಾಪನಕ್ಕೆ ಬಹಿಷ್ಕಾರ ಹಾಕಿ ಮುಷ್ಕರ ನಡೆಸುತ್ತಿರುವ ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರಾಂಶುಪಾಲರ ಹಾಗೂ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗದೆ ಪರ್ಯಾಯ ಮಾರ್ಗದ ಕುರಿತು ದಿನಕೊಂದು ನಿರ್ಧಾರ ಕೈಗೊಳ್ಳುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಸರ್ಕಾರವು ಚೆಲ್ಲಾಟವಾಡುತ್ತಿದೆ.
ಸರ್ಕಾರವೇ ನೇಮಕ ಮಾಡಿದ್ದ ಕುಮಾರ್ ನಾಯಕ್ ನೇತೃತ್ವದ ಅಧಿಕಾರಿ ಸಮಿತಿಯ ವರದಿ ಸರ್ಕಾರದ ಬಳಿ ಸಿದ್ಧವಿದ್ದರೂ ಪೂರ್ಣ ಪ್ರಮಾಣದಲ್ಲಿ ಅದನ್ನು ಆನುಷ್ಠಾನ ಗೊಳಿಸದೆ ಕೇವಲ ಒಂದು ವೇತನ ಬಡ್ತಿ ನೀಡುವುದಾಗಿ ಆದೇಶ ಹೊರಡಿಸಿರುವುದು ಶಿಕ್ಷಕರ ಮೂಗಿಗೆ ಬೆಣ್ಣೆ ಸವರುವ ಪ್ರಯತ್ನವಾಗಿದೆ.
ಮೌಲ್ಯಮಾಪನ ಕಾರ್ಯವನ್ನು ಖಾಸಗಿ ಕಾಲೇಜುಗಳ ಉಪನ್ಯಾಸಕರಿಂದ, ನಿವೃತ್ತ ಉಪನ್ಯಾಸಕರಿಂದ ನಡೆಸುತ್ತೇವೆ ಎಂದು ದಿನಕೊಂದು ಹೇಳಿಕೆಯನ್ನು ನೀಡುತ್ತಾ, ವಿದ್ಯಾರ್ಥಿಗಳನ್ನು ಹಾಗೂ ಪೋಷಕರನ್ನು ದಿಕ್ಕುತಪ್ಪಿಸುವ ಕೆಲಸ ಮಾಡದೆ ಪದವಿಪೂರ್ವ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಪ್ರೌಢಶಾಲೆಯ ಶಿಕ್ಷಕ ನ್ಯಾಯಯುತ ಬೇಡಿಕೆಯಾದ ಕುಮಾರ ನಾಯಕ್ ವರದಿಯನ್ನು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳಿಸುವ ಮೂಲಕ ಮೌಲ್ಯಮಾಪನ ಪ್ರಕ್ರಿಯೆಯನ್ನು ಸುಗಮಗೊಳಿಸುವಂತೆ ಒತ್ತಾಯಿಸಿದ್ದಾರೆ.
ಈಗಾಗಲೇ ಪ್ರಶ್ನೆ ಪತ್ರಿಕೆಗಳ ಬಹಿರಂಗ, ರಾಸಯನಶಾಸ್ತ್ರ ಪತ್ರಿಕೆಯ ಮರುಪರೀಕ್ಷೆ ಮುಂತಾದ ಗೊಂದಲಗಳ ನಡುವೆ ಆತಂಕಕ್ಕೆ ಒಳಗಾಗಿರುವ ವಿದ್ಯಾರ್ಥಿಗಳು ಹಾಗೂ ಪೋಷಕರು ಅಸಮರ್ಪಕ ಹಾಗೂ ನಿಧಾನಗತಿಯ ಮೌಲ್ಯಮಾಪನದ ವಿರುದ್ಧ ಬೀದಿಗಿಳಿಯುವ ಮೊದಲೆ ಸರ್ಕಾರ ಎಚ್ಚೆತ್ತುಕೊಳ್ಳುವುದನ್ನು ಬಿಟ್ಟು ಪ್ರಾಂಶುಪಾಲ ಉಪನ್ಯಾಸಕರನ್ನು ಹತ್ತಿಕ್ಕುವ ಸರ್ಕಾರದ ಪ್ರಯತ್ನವನ್ನು ಅತ್ಯಂತ ತೀವ್ರವಾಗಿ ಖಂಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.