ನವದೆಹಲಿ: ಉಗ್ರ ಮೌಲಾನಾ ಮಸೂದ್ ಅಝರ್ನನ್ನು ಜಾಗತಿಕ ಭಯೋತ್ಪಾದಕ ಎಂದು ವಿಶ್ವಸಂಸ್ಥೆಯಲ್ಲಿ ಘೋಷಿಸುವ ಭಾರತದ ಪ್ರಸ್ತಾವನೆಗೆ ಅಡ್ಡಗಾಲು ಹಾಕಿದ ಚೀನಾಗೆ ಜೈಶೇ-ಇ-ಮೊಹಮ್ಮದ್ ಉಗ್ರ ಸಂಘಟನೆ ಧನ್ಯವಾದಗಳನ್ನು ತಿಳಿಸಿದೆ.
ತನ್ನ ಮುಖವಾಣಿ ಅಲ್-ಖಲಂನಲ್ಲಿ ಜೈಶೇ-ಇ-ಮೊಹಮ್ಮದ್ ಉಗ್ರ ಸಂಘಟನೆ ಚೀನಾವನ್ನು ತನ್ನ ಗೆಳೆಯ ಎಂದು ಹೇಳಿಕೊಂಡಿದ್ದು, ಧನ್ಯವಾದ ಸಲ್ಲಿಸಿದೆ.
ಮೌಲಾನಾ ಮಸೂದ್ ಅಝರ್ ನಿಷೇಧಿತ ಭಯೋತ್ಪಾದಕ ಎಂದು ಗುರುತಿಸಲು ವಿಶ್ವಸಂಸ್ಥೆ ಕ್ರೈಟೀರಿಯವನ್ನು ತಲುಪಿಲ್ಲ ಎಂದು ಹೇಳುವ ಮೂಲಕ ಆತನನ್ನು ಚೀನಾ ಕಾಪಾಡಿದೆ. ಈ ಮೂಲಕ ಭಯೋತ್ಪಾದನೆಗೆ ಚೀನಾ ಬಹಿರಂಗ ಬೆಂಬಲವನ್ನೇ ನೀಡಿದೆ.
ಭಾರತದ ಪ್ರಸ್ತಾವನೆಯನ್ನು ತಡೆಯುವ ಮೂಲಕ ಚೀನಾ ತನ್ನ ಗೆಳೆಯ ಪಾಕಿಸ್ಥಾನದ ಮಾನವನ್ನು ಉಳಿಸುವ ಪ್ರಯತ್ನ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.