ವಿಜಯವಾಡ: ಭಾರತದ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಉಳಿತಾಯದ ಅಭಿಯಾನಕ್ಕೆ ಕೇಂದ್ರ ವಿದ್ಯುತ್ ಸಚಿವ ಪಿಯುಷ್ ಗೋಯಲ್ ಅವರು ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಚಾಲನೆ ನೀಡಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಉಪಸ್ಥಿತರಿದ್ದರು.
ಕೃಷಿ ಅನುದಾನಗಳಿಗೆ ವಾರ್ಷಿಕ 65,000 ಕೋಟಿ ರೂ. ವ್ಯಯವಾಗುತ್ತಿದ್ದು, ಈ ಯೋಜನೆಯಿಂದ ವಾರ್ಷಿಕ 20,000 ಕೋಟಿ ಉಳಿತಾತವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕೃಷಿ ಯೋನಜೆಗಳನ್ನು ಗಮನದಲ್ಲಿರಿ ಹಳೆಯ ತಂತ್ರಜ್ಞಾನದ ಪಂಪ್ಗಳ ಬದಲು ಹೊಸ ಸಿಮ್ ಕಾರ್ಡ್ ಹೊಂದಿದ ಕೃಷಿ ಪಂಪ್ಗಳನ್ನು ಅಳವಡಿಸಲಾಗುವುದು ಎಂದು ಪಿಯುಷ್ ಗೀಯಲ್ ಹೇಳಿದ್ದಾರೆ.
ಈ ಪಂಪ್ಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ಇದನ್ನು ಕೃಷಿಕರು ತಮ್ಮ ಮೊಬೈಲ್ನ ಸಹಾಯದಿಂದೇ ನಿಯಂತ್ರಿಸಬಹುದು. ಸರ್ಕಾರ ಮುಂದಿನ ೩-೪ ವರ್ಷದಲ್ಲಿ ಹೊಸ ಸಮರ್ಥ ಯೋಜನೆಯನ್ನು ತರಲಿದೆ ಎಂದು ಗೋಯಲ್ ಹೇಳಿದ್ದಾರೆ.
2019ರ ಒಳಗಾಗಿ ಹೊಸ ಪಂಪ್ಗಳನ್ನು ಅಳವಡಿಸುವ ಮುಲಕ ಶೇ.30ರಷ್ಟು ವಿದ್ಯುತ್ ಉಳಿತಾಯ ಮಾಡುವ ಸಾಧತ್ಯೆ ಎಂದು ಹೊಂದಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.