ಅಲಿಪುರ್ದೌರ್: ಚುನಾವಣಾ ಆಖಾಡ ಪಶ್ಚಿಮಬಂಗಾಳದ ಅಲಿಪುರ್ದೌರ್ ಜಿಲ್ಲೆಯ ಮದರಿಹತ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಬಂಗಾಳದ ಜನತೆಯ ಬಗ್ಗೆ ಅವರಿಗೆ ಕಾಳಜಿಯಿಲ್ಲ ಎಂದು ಆರೋಪಿಸಿದರು.
ಫ್ಲೈಓವರ್ ಕುಸಿತ ದೇವರ ಕೃತ್ಯ ಎಂದು ಇಲ್ಲಿನ ರಾಜಕಾರಣಿಗಳು ಹೇಳುತ್ತಾರೆ, ಆದರೆ ಅದು ಭ್ರಷ್ಟಾಚಾರದ ಕೃತ್ಯ. ಬ್ಯಾನರ್ಜಿಯವರು ನಾವು ಕರೆದ ಎಲ್ಲಾ ಮೀಟಿಂಗ್ಗಳನ್ನು ಬಹಿಷ್ಕರಿಸಿದ್ದಾರೆ, ಆದರೆ ದೆಹಲಿಗೆ ಬಂದಾಗೆಲ್ಲಾ ಸೋನಿಯಾ, ರಾಹುಲ್ ಅವರನ್ನು ಭೇಟಿಯಾಗಿದ್ದಾರೆ. ಅವರಿಗೆ ಬಂಗಾಳದ ಜನತೆಯ ಬಗ್ಗೆ ಕಾಳಜಿಯಿಲ್ಲ ಎಂದು ಆರೋಪಿಸಿದರು.
ಶಾರದಾ ಹಗರಣದಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಅವರು ಪ್ರಯತ್ನಿಸುತ್ತಿದ್ದಾರೆ, ಫ್ಳೈಓವರ್ ಕುಸಿತವಾದ ತಕ್ಷಣ ಎಡಪಂಥಿಯರನ್ನು ಅವರು ದೂರಲು ಆರಂಭಿಸಿದರೇ ಹೊರತು ಬೇರೆನನ್ನೂ ಮಾಡಿಲ್ಲ ಎಂದರು.
ಬಡವರ ಪರವಾಗಿ ನಾನು ಶ್ರಮಿಸುತ್ತೇನೆ ಎಂಬ ಭರವಸೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.