ನವದೆಹಲಿ: ಶೀಘ್ರದಲ್ಲೇ ಭಾರತಕ್ಕೆ ಆಗಮಿಸಲಿರುವ ಇಂಗ್ಲೆಂಡ್ ರಾಜಕುಮಾರ ಪ್ರಿನ್ಸ್ ವಿಲಿಯಂ ಮತ್ತು ಕೇಟ್ ಮಿಡಲ್ಟನ್ ದಂಪತಿಗೆ ಪ್ರಧಾನಿ ನರೇಂದ್ರ ಮೋದಿ ಔತಣಕೂಟ ಏರ್ಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಪ್ರಿಲ್ 10 ರಿಂದ ಈ ದಂಪತಿಗಳು ಭಾರತ ಮತ್ತು ಭೂತಾನ್ಗೆ 10 ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಎ.10ಕ್ಕೆ ಮುಂಬಯಿಗೆ ಆಗಮಿಸುವ ಇವರು ಎ.16ಕ್ಕೆ ತಾಜ್ಮಹಲ್ಗೆ ಭೇಟಿಕೊಟ್ಟು ಪ್ರವಾಸ ಕೊನೆಗೊಳಿಸಲಿದ್ದಾರೆ.
ಮೋದಿ ಜೊತೆಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರೂ ಈ ದಂಪತಿಗಳನ್ನು ನವದೆಹಲಿಯಲ್ಲಿ ಸ್ವಾಗತಿಸಲಿದ್ದಾರೆ.
ನವೆಂಬರ್ನಲ್ಲಿ ಯುಕೆಗೆ ತೆರಳಿದ್ದ ಮೋದಿ ಬಕಿಂಗ್ಹ್ಯಾಮ್ ಪ್ಯಾಲೇಸ್ನಲ್ಲಿ ರಾಣಿ ಜೊತೆ ಔತಣಕೂಟದಲ್ಲಿ ಭಾಗಿಯಾಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.