ನವದೆಹಲಿ: ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್ಸಿ)ದ ಪ್ರಸ್ತಾಪಿತ ರೈಲು ಅಡಚಣೆ ವಿಚಲನ ಸಾಧನ(ಆಡ್)ದಿಂದ ಚಾಲಕ ರಹಿತ ರೈಲುಗಳ ಅಡಚಣೆ, ಹಳಿ ತಪ್ಪುವಂತಹ ಘಟನೆ ತಪ್ಪಲಿದೆ.
ದೆಹಲಿ ಮೆಟ್ರೋ ನಿಗಮ ಈ ಯೋಜನೆಯನ್ನು ಆರಂಭಿಸಿದ್ದು, ಈ ಯೋಜನೆ ಮುಂದಿನ ವರ್ಷ ಪೂರ್ಣಗೊಳ್ಳಲಿದೆ ಎನ್ನಲಾಗಿದೆ.
ಆಟೋ-ಪೈಲಟ್ ಮೋಡ್ ಸಕ್ರಿಯಗೊಳ್ಳುವವರೆಗೆ ಚಾಲಕರ ಸಹಾಯದಿಂದಲೇ ಈ ರೈಲುಗಳು ಚಲಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಾಲಕರಹಿತ ರೈಲುಗಳಲ್ಲಿ ಸಾರ್ವಜನಿಕ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಡಿಎಂಆರ್ಸಿಯ ವ್ಯವಸ್ಥಾಪಕ ನಿರ್ದೇಶಕ ಮಾಂಗು ಸಿಂಗ್ ಹೇಳಿದ್ದಾರೆ.
ಈ ರೈಲುಗಳು ಎಲ್ಲಾ ಮೂಲಭೂತ ಆಧುನಿಕ ಸೌಲಭ್ಯಗಳಾದ ವೈಫೈ, ಪ್ರತಿ ರೈಲು ಬೋಗಿಗಳಲ್ಲಿ 3 ಸಿಸಿ ಕ್ಯಾಮೆರಾ, ಎಲ್ಇಡಿ ಪರದೆಗಳನ್ನು ಹೊಂದಲಿದೆ. ಚಾಲಕನ ಕ್ಯಾಬಿನ್ ಇರುವ ಸ್ಥಳದಲ್ಲಿ 2 ಎಲ್ಇಡಿ ಪರದೆಗಳಿರಲಿದ್ದು, ರೈಲಿನಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು ಸಹಕಾರಿಯಾಗಲಿದೆ.
ಆದರೆ ಈ ರೈಲುಗಳಲ್ಲಿ ಚಾಲಕನಿಗೆ ಪ್ರತ್ಯೇಕ ಕ್ಯಾಬಿನ್ ಇರದೇ ಇದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಸಾಗಿಸಬಹುದು ಎಂದು ಮಾಂಗೂ ಸಿಂಗ್ ಹೇಳಿದ್ದಾರೆ.
ಕಾರ್ಯಾಚರಣೆ ನಿಯಂತ್ರಣ ಕೇಂದ್ರದ (OTC) ಅಧಿಕಾರಿಗಳು ಈ ರೈಲಿನ ಮೇಲ್ವಿಚಾರಣೆ ನಡೆಸಲಿದ್ದಾರೆ. ಪ್ರತಿ ಒಂದು ಕಿ.ಮೀ. ಅಂತರದಲ್ಲಿ ರೈಲು ನಿಯಂತ್ರಣ ಕೇಂದ್ರ ಇರಲಿದ್ದು, ತಕ್ಷಣದ ನೆರವಿಗೆ ಸಾಧ್ಯವಾಗಲಿದೆ ಎಂದು ಡಿಎಂಆರ್ಸಿ ವಕ್ತಾರ ಅನುಜ್ ದಯಾಳ್ ಹೇಳಿದ್ದಾರೆ.
ಚಾಲಕರಹಿತ ರೈಲುಗಳು ಸ್ಪೇನ್ನ ಬಾರ್ಸಿಲೋನಾ ಹಾಗೂ ಕೆನಡಾದ ವಾನ್ಕೋವರ್ಗಳಲ್ಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.