ಬೆಂಗಳೂರು : ಕುಮಾರ್ ನಾಯಕ್ ವರದಿ ಅನುಷ್ಟಾನ ಆಗ್ರಹಿಸಿ ಪಿಯು ಮೌಲ್ಯಮಾಪನ ವನ್ನು ಶಿಕ್ಷಕರು ಬಹಿಷ್ಕರಿಸಿದ್ದಾರೆ.
ಪಿಯು ಮೌಲ್ಯಮಾಪನ ಸ್ಥಗಿತಗೊಳಿಸಿ ತಮ್ಮ ಬೇಡಿಕೆಗಳ ಈಡೇರಿಸುವಂತೆ ಶಿಕ್ಷಕರು ಸರಕಾರವನ್ನು ಒತ್ತಾಯಿಸಿದ್ದು, ಸಿಎಂ ಸೇರಿದಂತೆ ಸಚಿವರ ಮಾತೆಕತೆ ಮತ್ತು ಸಂದಾನ ವಿಫಲಗೊಂಡಿದೆ. ಸರಕಾರ ಎಸ್ಮಾ ಕಾಯಿದೆಯ ಅಸ್ತ್ರವನ್ನು ಪ್ರಯೋಗಿಸುತ್ತೇವೆ ಎಂದು ಎಚ್ಚರಿಸಿದರೂ ಶಿಕ್ಷಕರು ಜೈಲಿಗೆ ಹೋಗಲು ಸಿದ್ಧ ಎಂದು ಸರಕಾರದ ವಿರುದ್ಧ ಗುಡುಗಿದ್ದಾರೆ.
ಮೌಲ್ಯಮಾಪನಕ್ಕೆ ಈ ಹಿಂದೆ 21 ರೂ. ನೀಡುತ್ತಿದ್ದು ಈಗ 27 ರೂ.ಗೆ ಹೆಚ್ಚಿಸಲಾಗಿದೆ. ದಿನದ ಭತ್ಯೆಯನ್ನು 575 ರೂ.ನಿಂದ 745 ರೂ.ಗೆ ಏರಿಕೆ ಮಾಡಿ ಆದೇಶ ಹೊರಡಿಸಿ ಮೌಲ್ಯಮಾಪನಕ್ಕೆ ಹಾಜರಾಗುವಂತೆ ಪಿಯು ಮಂಡಳಿ ನಿರ್ದೇಶಕ ಡಾ.ರಾಮೇಗೌಡ ವಿನಂತಿಸಿದ್ದಾರೆ. ಆದರೆ ಶಿಕ್ಷಕರು ತಮಗೆ ಭತ್ಯೆ ಹಚ್ಚಳ ಬೇಡ ಕುಮಾರ್ ನಾಯಕ್ ವರದಿ ಅನುಷ್ಟಾನಕ್ಕೆ ಆಗ್ರಹಿಸಿದ್ದಾರೆ.
ಈಗ ಸಚಿವ ಕಿಮ್ಮನೆ ರತ್ನಾಕರ್ ಪಿಯುಬೋರ್ಡ್ ಅಧಿಕಾರಿಗಳೊಂದಿಗೆ ಈ ಪ್ರಕರಣದ ಸಂಬಂಧ ಸಭೆಯು ಪಿಯುಬೋರ್ಡ್ನಲ್ಲಿ ನಡೆಯುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.