ನವದೆಹಲಿ: ಶಂಕಿತ ಇಸಿಸ್ ಉಗ್ರ ಸಂಘಟನೆ ನಿಯೋಜಕ ಇಸ್ಮಾಯಿಲ್ ಅಬ್ದುಲ್ ರಾವೂಫ್ ಎಂಬಾತನನ್ನು ಮಂಗಳವಾರ ಪುಣೆ ವಿಮಾನನಿಲ್ದಾಣದಲ್ಲಿ ಬಂಧನಕ್ಕೊಳಪಡಿಸಲಾಗಿದೆ.
ಸಿರಿಯಾಗೆ ತೆರಳುವ ಉದ್ದೇಶದಿಂದ ಈತ ದುಬೈ ಪ್ರಯಾಣ ಬೆಳೆಸಿದ್ದ ಎನ್ನಲಾಗಿದೆ. ಈತನನ್ನು ಉತ್ತರಕನ್ನಡದ ಭಟ್ಕಳ ನಿವಾಸಿ ಎಂದು ಗುರುತಿಸಲಾಗಿದೆ.
ಇರಾಕ್ ಮತ್ತು ಸಿರಿಯಾ ಇಸಿಸ್ ಸದಸ್ಯರೊಂದಿಗೆ ನಿರಂತರ ಇಂಟರ್ನೆಟ್ ಚಾಟಿಂಗ್ ಮಾಡುತ್ತಿದ್ದ ಈತನ ಮೇಲೆ ಹಲವು ದಿನಗಳಿಂದ ಪೊಲೀಸರು ಕಣ್ಣಿಟ್ಟಿದ್ದರು, ಕೆಲ ದಿನಗಳ ಹಿಂದೆ ಕೇಂದ್ರ ಗೃಹಸಚಿವಾಲಯ ಈತನ ವಿರುದ್ಧ ಲುಕ್ ಔಟ್ ಸರ್ಕ್ಯುಲರ್ ಹೊರಡಿಸಿತ್ತು.
ಇದೀಗ ವಿದೇಶಕ್ಕೆ ಹಾರುವ ಯೋಜನೆಯಲ್ಲಿದ್ದಾಗ ಆತನನ್ನು ಬಂಧಿಸಲಾಗಿದೆ. ಈ ವರ್ಷದಲ್ಲಿ ಒಟ್ಟು 14 ಶಂಕಿತ ಇಸಿಸ್ ಒಲವುದಾರರನ್ನು ಬಂಧಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.