ನವದೆಹಲಿ: ಭಾರತದಲ್ಲಿ 100 ಕೋಟಿ ಜನರು ಆಧಾರ್ ಸಂಖ್ಯೆ ಹೊಂದಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಆಧಾರ್ ಸಂಖ್ಯೆ ವಿವರಗಳ ಗೌಪ್ಯತೆ ರಕ್ಷಣೆಗೆ ಮಾಡಲಾಗುವುದು. ಇದರ ಬಗ್ಗೆ ಜನರು ಭಯಪಡುವ ಅಗತ್ಯವಿಲ್ಲ. ಫೋನ್ ಟ್ಯಾಪಿಂಗ್ ಸಮಸ್ಯೆಗಳ ವಿರುದ್ಧ ಸುಪ್ರೀಂ ಕೋರ್ಟ್ ಜಾರಿಗೊಳಿಸಿರುವ ಎಲ್ಲಾ ಮಾನದಂಡಗಳನ್ನು ಆಧಾರ್ ಕಾಯಿದೆ ಅಡಿ ರೂಪಿಸಲಾಗಿದೆ ಎಂದು ಸಂಪರ್ಕ ಹಾಗೂ ಐಟಿ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಕಾನೂನಿನ ವಿಭಾಗ 29 ಪ್ರಕಾರ, ಎರಡು ಪ್ರಮುಖ ವಿವರಗಳಾದ ಜನರ ಬೆರಳಚ್ಚು ಮತ್ತು ಕಣ್ಣಿನ ಐರಿಸ್ ಗೌಪ್ಯ ಮಾಹಿತಿಗಳನ್ನು ಯಾವುದೇ ಕಾರಣಕ್ಕೂ ಬಹಿರಂಗ ಅಥವಾ ಹಂಚಿಕೊಳ್ಳಲಾಗುವುದಿಲ್ಲ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಆಧಾರ್ ಕಾರ್ಡ್ ಸಂಖ್ಯೆಯನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆ, ಅಡುಗೆ ಅನಿಲ ಮತ್ತು ಸೀಮೆ ಎಣ್ಣೆ ಅಲ್ಲದೇ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಪ್ರಧಾನ ಮಂತ್ರಿ ಜನ ಧನ ಯೋಜನೆ, ನೌಕರರ ಭವಿಷ್ಯ ನಿಧಿ ಯೋಜನೆ ಮತ್ತಿತರ ಪಾವತಿ ಕಾರ್ಯಗಳಿಗೆ ಬಳಸಲಾಗುತ್ತಿದೆ.
ಈವರೆಗೆ 25.48 ಕೋಟಿ ಬ್ಯಾಂಕ್ ಖಾತೆಗಳು, ಶೇ.71ರಷ್ಟು ಎಲ್ಪಿಜಿ ಅನಿಲ ಸಂಪರ್ಕ, ಶೇ.45 ಪಡಿತರ ಚೀಟಿಗಳನ್ನು ಆಧಾರ್ನೊಂದಿಗೆ ಸಂಪರ್ಕಿಸಲಾಗಿದೆ.
ಯುಐಡಿಎಐ 2010ರಿಂದ ಈವರೆಗೆ 100 ಕೋಟಿ ಆಧಾರ್ ಕಾರ್ಡ್ಗಳನ್ನು ವಿತರಿಸಿದ್ದು, ಇದರಿಂದ ಎಲ್ಪಿಜಿಯ ನೇರ ಲಾಭ ವರ್ಗಾವಣೆಯಿಂದ 14,672 ಕೋಟಿ ಲಾಭ ಗಳಿಸಿದೆ ಎಂದು ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.