ನವದೆಹಲಿ: ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಅವರು 25 ಮೂಲಾಂಕ ರೆಪೋ ದರ (ಶೇ.0.25) ಕಡಿತಗೊಳಿಸಿದ್ದಾರೆ. ಆರು ತಿಂಗಳ ಬಳಿಕ ಮೊದಲ ಬಾರಿಗೆ ರೆಪೋ ದರ ಇಳಿಸಲಾಗಿದ್ದು, ಕಳೆದ 5 ವರ್ಷಗಳಲ್ಲೇ ಅತಿ ಕಡಿಮೆ ರೆಪೋ ದರ (6.50) ಇದಾಗಿದೆ.
ರೆಪೋ ದರದೊಂದಿಗೆ ಗೃಹ ಸಾಲ ಹಾಗೂ ವಾಹನ ಸಾಲಗಳ ದರವನ್ನು ಕೂಡ ಕಡಿತಗೊಳಿಸಲಾಗಿದೆ.
ಕನಿಷ್ಠ ವೆಚ್ಚ ಆಧಾರಿತ ಸಾಲ ಸಾಲಗಾರರಿಗೆ ಸಹಾಯಕವಾಗಲಿದೆ. ಆರ್ಬಿಐ ದರ ಕಡಿತಗೊಳಿಸುವ ಬಗ್ಗೆ ಗಮನಿಸಲಾಗುವುದು. ಮಾನ್ಸೂನ್, ಹಣದುಬ್ಬರ ಮತ್ತು ದರಗಳ ಬದಲಾವಣೆ ಭವಿಷ್ಯದ ವಿತ್ತೀಯ ನೀತಿ ನಿಲುವುಗಳನ್ನು ನಿರ್ಧರಿಸುತ್ತದೆ ಎಂದು ಆರ್ಬಿಐ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.
ರೆಪೋ ದರವು ಸಾಲದಾತರಿಗೆ ರಿಸರ್ವ್ ಬ್ಯಾಂಕ್ ನೀಡುವ ಅಲ್ಪಾವಧಿ ಸಾಲದ ಹಣವಾಗಿದ್ದು, ರೆಪೋ ದರ ಇಳಿಕೆಯಿಂದ ಸಾಲದ ಕಂತುಗಳು (ಇಎಂಐ) ಕಡಿಮೆಯಾಗಲಿದೆ. ಸರ್ಕಾರ ಆರ್ಥಿಕ ಬೇಡಿಕೆ ಹೆಚ್ಚಿಸಲು ರೆಪೊ ದರ ಕಡಿತಗೊಳಿಸಿದೆ ಎಂದು ಬ್ಯಾಂಕುಗಳು ಹೇಳಿವೆ.
ಆದರೆ ರೆಪೋ ದರ ಕಡಿತದಿಂದ ಶೇರು ಪೇಟೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.