ಮುಂಬಯಿ: ಇತ್ತೀಚೆಗೆ ಮುಂಬಯಿಯ ದಿಯೋನಾರ್ ತ್ಯಾಜ್ಯ ಸಂಗ್ರಾಹಕ ಪ್ರದೇಶದಲ್ಲಿ ಬೆಂಕಿ ಆವರಿಸಿ ವಾಯು ಮಾಲಿನ್ಯಕ್ಕೆ ಕಾರಣವಾಗಿತ್ತು. ಇದೀಗ ಈ ಪ್ರದೇಶದಿಂದ 6 ಕಿ.ಮೀ ದೂರದಲ್ಲಿರುವ ಚೆಂಬೂರ್ನ ವಿವೇಕಾನಂದ ಶಿಕ್ಷಣ ಸಂಸ್ಥೆ ತ್ಯಾಜ್ಯವನ್ನು ಸ್ಥಳೀಯ ತ್ಯಾಜ್ಯ ಸಂಗ್ರಹಣ ಪ್ರದೇಶದಲ್ಲಿ ಶೇಖರಿಸಿಡಲಾಗುತ್ತಿದ್ದು ಒಣ ಹಾಗೂ ದ್ರವ ತ್ಯಾಜ್ಯವನ್ನು ಶೇ.100ರಷ್ಟು ಮರುಬಳಕೆ ಮಾಡುವ ಮೂಲಕ ನಗರದ ಮೊದಲ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ವಿವೇಕಾನಂದ ಕಾಲೇಜು.
ಇಲ್ಲಿನ 2 ಶಿಕ್ಷಣ ಸಂಸ್ಥೆಗಳು ಪ್ರತಿ ನಿತ್ಯ ಸುಮಾರು 100 ಕೆಜಿ ಒಣ ಮತ್ತು ದ್ರವ ತ್ಯಾಜ್ಯವನ್ನು ಸಂಗ್ರಹಿಸುತ್ತಿವೆ. ಇದರಲ್ಲಿ 70 ಕೆಜಿ ತ್ಯಾಜ್ಯವನ್ನು ಗೊಬ್ಬರವಾಗಿ ಬಳಸಲಾಗುತ್ತಿದ್ದರೆ, ಉಳಿದ 30 ಕೆಜಿ ತ್ಯಾಜ್ಯವನ್ನು ಎನ್ಜಿಓ ಶ್ರೀ ಮುಕ್ತಿ ಸಂಘಟನೆ ಮೂಲಕ ಮರುಬಳಕೆ ಮಾಡುತ್ತಿದೆ. ಮಹಾನಗರ ಪಾಲಿಕೆ ಒಣ ತ್ಯಾಜ್ಯವನ್ನು ಟ್ರಕ್ಗಳ ಮೂಲಕ ಸಾಗಿಸುತ್ತಿದ್ದು, ದ್ರವ ತ್ಯಾಜ್ಯವನ್ನು ಕಾಲೇಜ್ ಕ್ಯಾಂಪಸ್ನಲ್ಲೇ ಗೊಬ್ಬರವಾಗಿಸಿ ಬಳಸಲಾಗುತ್ತಿದೆ. ಇದರಿಂದಾಗಿ ಕಾಲೇಜು ಸಂಸ್ಥೆ ಶೂನ್ಯ ತ್ಯಾಜ್ಯ ಕ್ಯಾಂಪಸ್ ಆಗಿ ಮಾರ್ಪಟ್ಟಿದೆ ಎಂದು ಬೃಹನ್ಮುಂಬಯಿ ಮಹಾನಗರಪಾಲಿಕೆಯ ಹರ್ಷದ್ ಕಾಲೆ ಹೇಳಿದ್ದಾರೆ.
2014ರಲ್ಲಿ ಆರಂಭಿಸಲಾದ ಈ ಯೋಜನೆಗಾಗಿ ಸಂಸ್ಥೆಗೆ 18,000 ವೆಚ್ಚ ತಗುಲಿದ್ದು, ಈಗಾಗಲೇ 3000 ಕೆಜಿ ಸಾವಯವ ಗೊಬ್ಬರ ಮರುಬಳಕೆ ಮಾಡಲಾಗಿದೆ. ಎಲೆಟ್ರಾನಿಕ್ ತ್ಯಾಜ್ಯವನ್ನು ಸ್ಕ್ರ್ಯಾಪ್ ವಿತರಕರಿಗೆ ಮಾರಾಟ ಮಾಡಲಾಗುತ್ತಿದ್ದು, ಇದನ್ನು ಮಿಶ್ರ ಗೊಬ್ಬರ ನಿರ್ವಹಣೆಗಾಗಿ ಬಳಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.