ನವದೆಹಲಿ: ಇಸಿಸ್ ಉಗ್ರರಿಂದ ಅಪಹರಿಸಲ್ಪಟ್ಟ ಭಾರತದ ಪಾದ್ರಿ ಫಾದರ್ ಥೋಮಸ್ ಉಝುನ್ನಲ್ಲಿಲ್ ಅವರು ಕ್ಷೇಮವಾಗಿದ್ದಾರೆ, ಅವರನ್ನು ಬಿಡಿಸುವ ಸರ್ವ ಪ್ರಯತ್ನ ಮುಂದುವರೆದಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ(ಸಿಬಿಸಿಐ) ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಮಾ.೪ರಂದು ಯೆಮನ್ನಲ್ಲಿ ದಾಳಿ ನಡೆಸಿದ್ದ ಇಸಿಸ್ ಉಗ್ರರು ಆ ವೇಳೆ ಸೆರೆ ಸಿಕ್ಕ ಕೇರಳ ಮೂಲದ ಥೋಮಸ್ ಅವರನ್ನು ಅಪಹರಿಸಿ ಕೊಂಡೊಯ್ಯುದಿದ್ದರು. ಅಲ್ಲದೇ ಅವರನ್ನು ಶೀಲುಬೆಗೇರಿಸಿ ಕೊಲ್ಲುವ ಬೆದರಿಕೆಯನ್ನೂ ಹಾಕಿದ್ದರು.
ಇದೀಗ ಸುಷ್ಮಾ ಅವರು ಥೋಮಸ್ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ಅಲ್ಲದೇ ಅವರ ಬಿಡುಗಡೆಯ ಭರವಸೆ ನೀಡಿದ್ದಾರೆ. ಆದರೆ ಸಂಪೂರ್ಣ ಮಾಹಿತಿಯ ವಿವರವನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.