ಜೈಪುರ: ರಾಜಸ್ಥಾನದ ರಾಜ್ಸಾಮಂದ್ ಜಿಲ್ಲೆಯ ಜನರು ಇದ್ದ ಏಕೈಕ ಶರಾಬು ಅಂಗಡಿಯನ್ನು ಮುಚ್ಚಿಸುವ ಸಲುವಾಗಿ ಮತದಾನ ಮಾಡಿ ತಮ್ಮ ಕಾರ್ಯವನ್ನು ಸಾಧಿಸಿಕೊಂಡಿದ್ದಾರೆ. ಈ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ.
ರಾಜಸ್ಥಾನ ಎಕ್ಸ್ಸೈಸ್ ರೂಲ್ಸ್ ಅಧೀನ ಮತದಾನವನ್ನು ಏರ್ಪಡಿಸಲಾಗಿತ್ತು, ಶೇ.50ರಷ್ಟು ಜನರು ಶರಾಬು ಅಂಗಡಿಯ ವಿರುದ್ಧ ಮತ ಚಲಾವಣೆ ಮಾಡಿದರೆ ಅದನ್ನು ಮುಚ್ಚಿಸುವ ಅಧಿಕಾರವನ್ನು ಪಂಚಾಯತ್ಗೆ ನೀಡಲಾಗಿತ್ತು.
ಅದರಂತೆ ಗುರುವಾರ ಮತದಾನ ನಡೆದಿದ್ದು, ಶೇ.90ರಷ್ಟು ಹಳ್ಳಿಗರು ಶರಾಬು ಅಂಗಡಿಯನ್ನು ಮುಚ್ಚುವುದರ ಪರವಾಗಿ ಮತದಾನ ಮಾಡಿ ವಿಜಯಶಾಲಿಗಳಾಗಿದ್ದಾರೆ.
‘ಕಚ್ಚಬಲಿ ಗ್ರಾಮ ಪಂಚಾಯತ್ನಲ್ಲಿ ಒಟ್ಟು 2,039ಮತ ಬಿದ್ದಿದ್ದವು, ಇದರಲ್ಲಿ 1,937 ಮತ ಶರಾಬು ಅಂಗಡಿ ಮುಚ್ಚುವುದರ ಪರವಾಗಿತ್ತು. ಈ ಮೂಲಕ ಶರಾಬು ಅಂಗಡಿ ಮುಚ್ಚುವಂತೆ ಹೋರಾಟಕ್ಕೆ ಇಳಿದ ಸರ್ಪಂಚ್ ಗೀತಾ ದೇವಿ ನೇತೃತ್ವದ ಮಹಿಳಾ ಸಂಘಟನೆಗಳಿಗೆ ಜಯವಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.