ವಾಷಿಂಗ್ಟನ್: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಉಗ್ರವಾದದ ಬಗ್ಗೆ ತಮ್ಮ ಕಟು ಧೋರಣೆಯನ್ನು ಮತ್ತೊಮ್ಮೆ ಸಾದರಪಡಿಸಿದ ಪ್ರಧಾನಿ ನರೇಂದ್ರ ಮೋದಿ, ಉಗ್ರವಾದವನ್ನು ತಡೆಯದೆ, ಅದರ ವಿರುದ್ಧ ಕಠಿಣ ಕ್ರಮಕೈಗೊಳ್ಳದೆ ನ್ಯೂಕ್ಲಿಯರ್ ಟೆರರಿಸಂನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದಿದ್ದಾರೆ.
ಭಯೋತ್ಪಾದಕರು 21ನೇ ಶತಮಾನದ ತಂತ್ರಜ್ಞಾನವನ್ನು ಬಳಕೆ ಮಾಡುತ್ತಿದ್ದಾರೆ, ಆದರೆ ಅದಕ್ಕೆ ಪ್ರತ್ಯುತ್ತರವಾಗಿ ನಾವು ಹಳೆಯ ತಂತ್ರಜ್ಞಾನ ಬಳಸುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಅವನು ಅವರ ಭಯೋತ್ಪಾದಕ, ಇವನು ಇವರ ಭಯೋತ್ಪಾದಕ ಎಂಬ ನಿಲುವನ್ನು ನಾವು ಬಿಟ್ಟು ಎಲ್ಲರು ಒಗ್ಗಟ್ಟಾಗಿ ಭಯೋತ್ಪಾದನೆಯ ವಿರುದ್ಧ ಹೋರಾಟ ಮಾಡಬೇಕು ಎಂದಿದ್ದಾರೆ.
ಭಯೋತ್ಪಾದನೆ ನಮ್ಮ ಸಮಸ್ಯೆಯಲ್ಲ ಅದು ಅವರ ಸಮಸ್ಯೆ ಎಂಬ ನಿಲುವನ್ನೂ ಬಿಟ್ಟ ಬಿಡಬೇಕು ಎಂದು ಅವರು ಪ್ರತಿಪಾದಿಸಿದರು.
ನ್ಯೂಕ್ಲಿಯರ್ ಸೆಕ್ಯೂರಿಟಿ ಸಮಿತ್ ಅಂಗವಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ವೈಟ್ಹೌಸ್ನಲ್ಲಿ ಏರ್ಪಡಿಸಿದ ಔತನಕೂಟದಲ್ಲಿ ಮಾತನಾಡಿದ ಮೋದಿ, ಭಯೋತ್ಪಾದನೆಯ ಸಮಕಾಲೀನ ಮೂರು ವಿಧಗಳ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.
ಮೊದಲನೆಯದಾಗಿ ಭಯೋತ್ಪಾದಕರು ತೀವ್ರ ಹಿಂಸೆಯನ್ನು ತನ್ನ ಅಂಗವಾಗಿ ಬಳಕೆ ಮಾಡುತ್ತಿದ್ದಾರೆ, ಎರಡನೆಯದಾಗಿ ನಾವು ಗುಹೆಯೊಳಗಿರುವ ಮನುಷ್ಯನಿಗಾಗಿ ಹುಡುಕಾಡುತ್ತಿಲ್ಲ ಬದಲಾಗಿ ಕಂಪ್ಯೂಟರ್ ಮತ್ತು ಸ್ಮಾರ್ಟ್ ಫೋನ್ ಹೊಂದಿರುವ ಸಿಟಿಯಲ್ಲಿರುವ ಉಗ್ರನಿಗಾಗಿ ಹುಡುಕಾಡುತ್ತಿದ್ದೇವೆ. ಮೂರನೆಯದಾಗಿ ನ್ಯೂಕ್ಲಿಯರ್ ಟ್ರಾಫಿಕರ್ರೊಂದಿಗೆ ಕೆಲಸ ಮಾಡುವ ಸ್ಟೇಟ್ ಆಕ್ಟರ್ ಮತ್ತು ಉಗ್ರರ ನೆಲೆ ಹೆಚ್ಚಿನ ಬೆದರಿಯೆನ್ನೊಡ್ಡುತ್ತಿದೆ ಎಂಬುದಾಗಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಭಯೋತ್ಪಾದನೆಯಿಂದ ನ್ಯೂಕ್ಲಿಯರ್ ಸೆಕ್ಯೂರಿಟಿ ತತ್ಕ್ಷಣ ಸಾಧಿಸಬೇಕು ಎಂಬುದಕ್ಕೆ ಬ್ರುಸೆಲ್ಸ್ ದಾಳಿಯೇ ಉದಾಹರಣೆ ಎಂದ ಮೋದಿ, ನ್ಯೂಕ್ಲಿಯರ್ ಸೆಕ್ಯೂರಿಟಿ ಸಾಧಿಸಲು ಒಬಾಮ ಮಾಡುತ್ತಿರುವ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.