ಹೈದರಾಬಾದ್: ಹೈದರಾಬಾದ್ ವಿಶ್ವವಿದ್ಯಾಲಯ ಅದೇಕೋ ವಿವಾದಗಳಿಂದ ಹೊರ ಬರುವ ಮನಸ್ಸು ಮಾಡುತ್ತಿಲ್ಲ, ಇಲ್ಲಿನ ವಿದ್ಯಾರ್ಥಿಗಳು ದಿನಕ್ಕೊಂದು ರಗಳೆ ತೆಗೆದು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಇದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲಾ ವಿಷಯದಲ್ಲಿ ಈ ವಿಶ್ವವಿದ್ಯಾಲಯದಲ್ಲಿ ಸಾಕಷ್ಟು ಗಲಾಟೆ, ಪ್ರತಿಭಟನೆ, ಜಟಾಪಟಿಗಳು, ವಾಗ್ಯುದ್ಧಗಳು ನಡೆದು ಹೋಗಿದೆ. ಇದೇ ಕಾರಣದಿಂದ ಕ್ಯಾಂಪಸ್ ಸೆಲಕ್ಷನ್ಗೂ ಯಾವುದೇ ಕಂಪನಿಗಳು ಇತ್ತ ಕಡೆ ಕಾಲಿಡುತ್ತಿಲ್ಲ. ವಿದ್ಯಾರ್ಥಿಗಳು ಉದ್ಯೋಗವಿಲ್ಲದೆ ಅತಂತ್ರರಾಗಿದ್ದಾರೆ.
ಆದರೆ ಇದೀಗ ಹೊಸ ವಿವಾದ ಸೃಷ್ಟಿಸಿರುವ ವಿದ್ಯಾರ್ಥಿಗಳು ವೆಮುಲಾ ಹೆಸರಲ್ಲಿ ಸ್ಮಾರಕ ನಿರ್ಮಿಸಿದ್ದಾರೆ. ಟೆಂಟ್ ಆಕಾರದಲ್ಲಿ ವೆಮುಲಾ ಭಾವಚಿತ್ರ ಸೇರಿದಂತೆ ಇತರರ ಭಾವಚಿತ್ರ ಹಾಕಿ ವೆಮುಲಾಗೆ ಶ್ರದ್ಧಾಂಜಲಿ ಎಂದು ಬರೆಯಲಾಗಿದೆ. ಸ್ಮಾರಕದಂತೆ ಕೆಲ ವಿದ್ಯಾರ್ಥಿಗಳು ಇದನ್ನು ನೋಡಿಕೊಳ್ಳುತ್ತಿದ್ದಾರೆ.
ಇದೀಗ ಇದನ್ನು ತೆರವುಗೊಳಿಸುವುದು ವಿಶ್ವವಿದ್ಯಾಲಯ ಆಡಳಿತ ಮಂಡಳಿಗೆ ದೊಡ್ಡ ತಲೆನೋವಾಗಿದೆ. ಮೊದಲು ನೋಟಿಸ್ ಕೊಡುತ್ತೇವೆ ಆಮೇಲೆ ಕ್ರಮ ಜರುಗಿಸುತ್ತೇವೆ ಎಂದು ಅದ ಹೇಳಿದೆ.
ಒಟ್ಟಿನಲ್ಲಿ ವೆಮುಲಾ ಹೆಸರಲ್ಲಿ ವಿದ್ಯಾರ್ಥಿಗಳು ದಿನಕ್ಕೊಂದು ರಗಳೆ ಸೃಷ್ಟಿಸುತ್ತಿರುವುದಂತು ನಿಜ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.