ಹೈದರಾಬಾದ್: ನಮ್ಮ ಇತಿಹಾಸದ ಬಗ್ಗೆ ನಮಗೇ ತಿಳಿಯದೆ ಹೋದಾಗ ಹಲವಾರು ಎಡವಟ್ಟುಗಳು ಸಂಭವಿಸುತ್ತದೆ, ಅದಕ್ಕೇ ಯಾವದೇ ಕಾರ್ಯ ಮಾಡುವ ಮೊದಲು ಅದರ ಇತಿಹಾಸದತ್ತ ಒಮ್ಮೆ ತಿರುಗಿ ನೋಡುವುದು ಅತ್ಯಗತ್ಯ.
ಆಂಧ್ರ ಪ್ರದೇಶದ ಉರ್ದು ವಿಶ್ವವಿದ್ಯಾನಿಲಯಕ್ಕೆ ಖ್ಯಾತ ಶಿಕ್ಷಣತಜ್ಞ ಡಾ.ಅಬ್ದುಲ್ ಹಕ್ ಅವರ ಹೆಸರನ್ನು ಇಡಬೇಕಾಗಿತ್ತು. ಆದರೆ ಇತಿಹಾಸದ ಗಂಧ ಗಾಳಿ ಗೊತ್ತಿಲ್ಲದ ಜನಪ್ರತಿನಿಧಿಗಳು ಪಾಕಿಸ್ಥಾನ ಉರ್ದು ವಿದ್ವಾಂಸ ಮೌಲ್ವಿ ಅಬ್ದುಲ್ ಹಕ್ ಅವರ ಹೆಸರನ್ನು ವಿಶ್ವವಿದ್ಯಾಲಯಕ್ಕೆ ಇಡಲು ಮಸೂದೆಯನ್ನು ಅಂಗೀಕಾರಗೊಳಿಸಿದ್ದಾರೆ. ಇದಕ್ಕೆ ಎಲ್ಲರೂ ತಲೆಯಲ್ಲಾಡಿಸಿದ್ದಾರೆ.
ಮೌಲ್ವಿ ಅಬ್ದುಲ್ ಹಕ್ ವಿಭಜನೆಯ ವೇಳೆ ಪಾಕಿಸ್ಥಾನಕ್ಕೆ ತೆರಳಿ ಆ ದೇಶದ ಸೇವೆ ಮಾಡಿದವರು. ಆದರೆ ಡಾ. ಅಬ್ದುಲ್ ಹಕ್ ಓಸ್ಮಾನಿಯಾ ಕಾಲೇಜನ್ನು ಸ್ಥಾಪಿಸಿ ಭಾರತದ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿದವರು.
ಒಟ್ಟಿನಲ್ಲಿ ಹೆಸರನ್ನು, ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳದೆ ಜನಪ್ರತಿನಿಧಿಗಳು ಎಡವಟ್ಟು ಮಾಡಿ ಮಾನ ಕಳೆದುಕೊಂಡಿದ್ದಾರೆ.
ಇದೀಗ ಮತ್ತೆ ಆ ಮಸೂದೆಯನ್ನು ತಿದ್ದುಪಡಿಗಾಗಿ ಕಳುಹಿಸಿಕೊಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.