ಹೈದರಾಬಾದ್: ಇಲ್ಲಿಯ ಕರ್ನೂಲ್ನಲ್ಲಿರುವ ಪ್ರಸ್ತಾವಿತ ಉರ್ದು ವಿಶ್ವವಿದ್ಯಾಲಯಕ್ಕೆ ಪಾಕಿಸ್ಥಾನದ ಪ್ರಸಿದ್ಧ ವಿದ್ವಾಂಸ ಮೌಲ್ವಿ ಅಬ್ದುಲ್ ಹಕ್ ಹೆಸರನ್ನು ಇಡಲು ಆಂಧ್ರ ಸರ್ಕಾರ ನಿರ್ಧರಿಸಿದೆ. ಸರ್ಕಾರ ವಿಧಾನಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿದೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಗಂಟ ಶ್ರೀನಿವಾಸ ರಾವ್ ಅವರು ವಿಧಾನಸಭೆಯಲ್ಲಿ ಮೌಲ್ವಿ ಅಬ್ದುಲ್ ಹಕ್ ಉರ್ದು ವಿಶ್ವವಿದ್ಯಾಲಯ ವಿಧೇಯಕ, 2016 ಮಂಡಿಸಿದ್ದು, ಈ ಮಸೂದೆ ಜಾರಿಗೊಳಿಸುವಂತೆ ಕೋರಿದ್ದಾರೆ. ವಿಧಾಸಭೆಯಲ್ಲಿ ಇದರ ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ಮೌಲ್ವಿ ಅಬ್ದುಲ್ ಹಕ್ ಅವರು ಭಾರತೀಯ ಉಪಖಂಡದಲ್ಲಿ ಉರ್ದು ಭಾಷೆಯ ಬೆಳವಣಿಗೆಗೆ ಶ್ರಮಿಸಿದ್ದು, ಇದರಿಂದಾಗಿ ಅವರನ್ನು ಬಾಬಾ-ಎ-ಉರ್ದು ಅಥವಾ ಉರ್ದು ಜನಕ ಎಂದು ಕರೆಯಲಾಗಿದೆ.
ಆಂಧ್ರ ಸರ್ಕಾರ ಉರ್ದು ವಿಶ್ವವಿದ್ಯಾಲಯಕ್ಕೆ ಡಾ. ಅಬ್ದುಲ್ ಹಕ್ ಎಂದು ಹೆಡರಿಸಲು ನಿರ್ಧರಿದ್ದು, ಕೆಲವು ದೊಷಗಳ ಕಾರಣ ಮೌಲ್ವಿ ಅಬ್ದುಲ್ ಹಕ್ ಎಂದು ಬದಲಿಸಿದೆ. ಇಲ್ಲಿನ ಉಣನಿ ವೈದ್ಯಕೀಯ ಕಾಲೇಜು ಈಗಾಗಲೇ ಡಾ. ಅಬ್ದುಲ್ ಹಕ್ ಹೆಸರನ್ನು ಪಡೆದಿದೆ.
ಕರ್ನೂಲ್ನ ಒರ್ವಕಲ್ಲುವಿನ 125 ಎಕರೆ ಜಮೀನಿನಲ್ಲಿ ಈ ವಿಶ್ವವಿದ್ಯಾಲಯ ನಿರ್ಮಾಣಗೊಳ್ಳುತ್ತಿದೆ. ಆಂದ್ರ ಮುಖ್ಯಮಮತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಕಳೆದ ವರ್ಷ ಇದರ ಶಂಕುಸ್ಥಾಪನೆ ಮಾಡಿದ್ದು, ಮೊದಲ ಹಂತದ ನಿರ್ಮಾಣಕ್ಕೆ 20 ಕೋಟಿ ಬಿಡುಗಡೆ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.