ನವದೆಹಲಿ: 1945ರ ವಿಮಾನ ಅಫಘಾತದ ನಂತರ ನೇತಾಜಿ ಬದುಕಿದ್ದರು ಎಂದು ಕೇಂದ್ರ ಸರಕಾರ ಮಂಗಳವಾರ ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಕಡತಗಳನ್ನು ಬಹಿರಂಗಗೊಳಿಸಿವ ಸಂದರ್ಭ ತಿಳಿಸಿದೆ.
ವಿಮಾನ ಅಪಘಾತದಲ್ಲಿ ನೇತಾಜಿ ಅವರು ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದ್ದು, ಬಹಿರಂಗಗೊಂಡ ಕಡತಗಳ ಪ್ರಕಾರ ಆಗಸ್ಟ್ 18, 1945 ಬಳಿಕ ನೇತಾಜಿ ಅವರು ಮೂರು ರೇಡಿಯೋ ನೇರಪ್ರದಾರ ಮಾಡಿದ್ದರು ಎಂದು ಹೇಳಲಾಗಿದೆ.
ನೇತಾಜಿ ಅವರು ಮಾಡಿದ್ದ ನೇರಪ್ರಸಾರವನ್ನು ಬಂಗಾಳದ ಗವರ್ನರ್ ಹೌಸ್ನ ಮಾನಿಟರ್ ಸರ್ವೀಸ್ ನಿಯಂತ್ರಿಸಲಾಗುತ್ತಿತ್ತು. ಮಾತ್ರವಲ್ಲ ಅವನ್ನು ಅದು ಸಂಗ್ರಹಿಸಿಡಲಾಗಿತ್ತು ಎಂದು ತಿಳಿದು ಬಂದಿದೆ.
ನೇತಾಜಿ ಅವರ ಮೂರು ನೇರಪ್ರಸಾರಗಳಲ್ಲಿ ಮೊದಲ ನೇರಪ್ರಸಾರ ಡಿ.26, 1945 ರಂದು ಮಾದಲಾಗಿದ್ದು, ತಾನು ವಿಶ್ವದ ಅತ್ಯಂತ ಶಕ್ತಿಶಾಲಿ ಮತ್ತು ಪ್ರಭಾವಿಗಳ ಬಳಿ ಆಶ್ರಯ ಪಡೆದಿದ್ದು, ತೃತೀಯ ಮಹಾಯುದ್ಧದ ಸಂದರ್ಭ ಭಾರತಕ್ಕೆ ಮರಳುದಾಗಿ ತಿಳಿಸಿದ್ದರು.
ನಂತರದ ಎರಡು ಪ್ರಸಾರಗಳನ್ನು ಜನವರಿ 1946ರಲ್ಲಿ ಮಾತನಾಡಿ ನೇತಾಜಿ ಅವರು ಭಾರತಕ್ಕೆ ಇನ್ನೆರೆಡು ವರ್ಷಗಳಲ್ಲಿ ಸ್ವಾತಂತ್ರ್ಯ ದೊರಕಲಿದ್ದು, ಭಾರತ ಅಹಿಂಸಾತ್ಮಕ ಮಾರ್ಗದಲ್ಲಿ ಸ್ವಾತಂತ್ರ್ಯ ಪಡೆಯಲಿದೆ ಎಂದು ಅವರು ಹೇಳಿದ್ದರು.
ಫೆಬ್ರವರಿ 1946ರಲ್ಲಿ ಮಾಡಲಾಗಿತ್ತು ಎಂದು ವರದಿ ತಿಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.