ನವದೆಹಲಿ: ಗುಜರಾತ್ ದಂಗೆ ಮತ್ತು ಸಿಖ್ ದಂಗೆಗೆ ವ್ಯತ್ಯಾಸವಿದೆ ಎಂದು ಹೇಳಿದ್ದ ಜೆಎನ್ಯು ವಿದ್ಯಾರ್ಥಿ ಕನ್ಹಯ್ಯ ಕುಮಾರ್ ವಿರುದ್ಧ ಮತೆ ಆಕ್ರೋಶ ಭುಗಿಲೆದ್ದಿದೆ. ಈ ಬಾರಿ ಆತನ ಬೆಂಬಲಿಗರೇ ಆತನ ವಿರುದ್ಧ ಹರಿಹಾಯ್ದಿದ್ದಾರೆ.
‘ಸಾರಿ ಕನ್ಹಯ್ಯ ಈ ಬಾರಿ ನೀನು ತಪ್ಪಾಗಿದ್ದೀಯಾ, ಸಿಖ್ ದಂಗೆ ಕೂಡ ಸ್ಟೇಟ್ ಪ್ರಾಯೋಜಿತವಾಗಿತ್ತು’ ಎಂದು ಸಿಪಿಐ ಪಾಲಿಟ್ ಬ್ಯೂರೋ ಸದಸ್ಯೆ ಕವಿತಾ ಕೃಷ್ಣನ್ ಹೇಳಿದ್ದಾರೆ.
ಸಿಖ್ ಸಂಘಟನೆಗಳೂ ಕನ್ಹಯ್ಯ ವಿರುದ್ಧ ಹರಿಹಾಯ್ದಿವೆ. ಟ್ವಿಟರ್ನಲ್ಲಿ ಆತನ ವಿರುದ್ಧ ಟೀಕೆಗಳ ಮಹಾಪೂರವೇ ಹರಿದಿದೆ.
ಆದರೆ ಕನ್ಹಯ್ಯ ಮಾತ್ರ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ, ನಾನು ಆ ಅರ್ಥದಲ್ಲಿ ಹೇಳಿಲ್ಲ ಎಂದಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.