ಬೆಂಗಳೂರು : ಕಳೆದ ಜನವರಿ 22 ನೇ ತಾರೀಖಿನಿಂದ ಉಡುಪಿ ಜಿಲ್ಲೆಯ ಸಿಆರ್ಝಡ್ನಿಂದ ಬೊಗಸೆ ಮರಳು ತೆಗೆಯಲು ಅವಕಾಶವಿಲ್ಲ. ಒಳನಾಡು ಮರಳುಗಾರಿಕೆಯ ಹೊಣೆಇರುವ ಲೋಕೋಪಯೋಗಿ ಇಲಾಖೆ ಟೆಂಡರ್ ಹೆಸರಿನಲ್ಲಿ ಮತ್ತೊಂದು ಗೊಂದಲ ಉಂಟು ಮಾಡಿದ್ದು ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳಂತೂ ಸಂಪೂರ್ಣ ಸ್ಥಗಿತವಾಗಿದೆ. ಮಳೆಗಾಲ ಸನಿಹವಾಗುತ್ತಿದ್ದು ರಸ್ತೆಗಳ ಕೆಲಸವಂತೂ ಮರಳಿಲ್ಲದೇ ನಿಂತುಹೋಗಿದೆ.
ಕಾಳಸಂತೆಯಲ್ಲಿ ಮರಳು ಮಾರಾಟವಾಗುತ್ತಿರುವುದರಿಂದ ಬಡವರ ಮನೆಗೆ ಸರಕಾರ ಕೊಡುವ ಹಣಒಂದು ಲೋಡು ಮರಳು ಖರೀದಿಸಲು ಸಾಕಾಗುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಜಿಲ್ಲಾಡಳಿತದ ಎದುರು ಬಿ.ಜೆ.ಪಿ ಪ್ರತಿಭಟನೆ ಮಾಡಿದಾಗಲೂ ಕೂಡ ಸಮಸ್ಯೆ ಪರಿಹಾರವಾಗಿಲ್ಲ. ಸರಕಾರವೇ ಕೊಟ್ಟ ಭರವಸೆಯಂತೆ ಮರಳಿನ ಆತಂಕ ನಿವಾರಣೆ ಮಾಡಿಲ್ಲ. ಆದ್ದರಿಂದ ತಕ್ಷಣ ಸರಕಾರ ಮಧ್ಯ ಪ್ರವೇಶಿಸಬೇಕೆಂದು ರಾಜ್ಯ ಬಿ.ಜೆ.ಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಹಾಗೂ ಶಾಸಕ ಕೋಟಾ ಶ್ರೀನಿವಾಸ ಪೂಜಾರಿ ಗಣಿ ಮತ್ತು ಭೂ ವಿಜ್ಚಾನ ಮಂತ್ರಿ ವಿನಯ ಕುಲಕರ್ಣಿಯವರಿಗೆ ವಿಧಾನಸೌಧದಲ್ಲಿ ಮನವಿ ಸಲ್ಲಿಸಿದರು.
ಜಿಲ್ಲೆಯ ಮರಳಿನ ಗೊಂದಲ ನಿವಾರಣೆಯಾಗದಿದ್ದರೆ ಮತ್ತೊಮ್ಮೆ ಹೋರಾಟ ಮುಂದುವರಿಸುವುದು ನಮಗೆ ಅನಿವಾರ್ಯವಾಗಿದೆ ಎಂದು ಕೋಟಾ ಆಗ್ರಹಿಸಿದರು. ಮನವಿ ಸ್ವೀಕರಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖಾ ಮಂತ್ರಿ ವಿನಯ ಕುಲಕರ್ಣಿ ಈಗಾಗಲೇ ತಾನು ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ತಕ್ಷಣ ಕಾರ್ಯ ಪ್ರವೃತ್ತರಾಗುವುದಾಗಿ ಭರವಸೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.