ಸೈಪ್ರಸ್: ಅಲೆಕ್ಸಾಂಡ್ರಿಯಾದಿಂದ ಕೈರೋಗೆ ಹೊರಟಿದ್ದ ಈಜಿಪ್ಟ್ನ ದೇಶೀಯ ಈಜಿಪ್ಟ್ಏರ್ ವಿಮಾನವನ್ನು ಅಪಹರಿಸಿರುವುದಾಗಿ ಹೇಳಲಾಗಿದೆ.
ಈ ವಿಮಾನ ಸೈಪ್ರಸ್ನ ಲಾರ್ನಕಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದ್ದು, ವಿಮಾನದಲ್ಲಿ ಬಾಂಬ್ ಇರುವ ಬಗ್ಗೆ ಶಂಕಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನವನ್ನು ಇಬ್ರಾಹಿಂ ಸಮಾಹಾ ಎಂಬ ವ್ಯಕ್ತಿ ಅಪಹರಿಸಿದ್ದು, ಆತ ಸೈಪ್ರಸ್ನಲ್ಲಿರುವ ತನ್ನ ಮಾಜಿ ಪತ್ನಿಗೆ ಪತ್ರವೊಂದನ್ನು ಕಳುಹಿಸಲು ಈ ಕೃತ್ಯ ಮಾಡಿರುವುದಾಗಿ ಹೇಳಲಾಗಿದೆ.
ಈ ವಿಮಾನದಲ್ಲಿ 7 ಮಂದಿ ವಿಮಾನ ಸಿಬ್ಬಂದಿ ಹಾಗೂ 55 ಮಂದಿ ಪ್ರಯಾಣಿಸುತ್ತಿದ್ದರು ಎಂದು ಸೈಪ್ರಸ್ ಬ್ರಾಡ್ಕಾಸ್ಟಿಂಗ್ ಕಾರ್ಪೋರೇಷ್ನನ ವರದಿ ಮಾಡಿದೆ.
ಈ ವಿಮಾನದಲ್ಲಿ ಓರ್ವ ಶಸ್ತ್ರಧಾರಿ ಇರುವುದಾಗಿ ಹೇಳಲಾಗಿದೆ.
ಸದ್ಯ ವಿಮಾನ ಸಿಬ್ಬಂದಿಗಳು ಹಾಗೂ 5 ಮಂದಿ ವಿದೇಶಿ ಪ್ರಯಾಣಿಕರನ್ನು ಹೊರತುಪಡಿಸಿ 55 ಮಂದಿ ಪ್ರಯಾಣಿಕರನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.