ವಾಷಿಂಗ್ಟನ್: ಕ್ಯಾಲಿಫೋರ್ನಿಯಾದ ಶಿಕ್ಷಣ ಇಲಾಖೆ ಎಡಪಂಥೀಯರ ತಾಳಕ್ಕೆ ತಕ್ಕಂತೆ ಕುಣಿದು ಪಠ್ಯಪುಸ್ತಕದಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಿದೆ, ಇದರಲ್ಲಿ ಭಾರತದ ಇತಿಹಾಸವನ್ನು ತಿರುಚಿದ್ದು ಮಾತ್ರವಲ್ಲ ಹಿಂದೂ ಧರ್ಮದ ನೈಜ ಅಂಶಗಳನ್ನೇ ನಿರ್ಲಕ್ಷ್ಯ ಮಾಡಲಾಗಿದೆ.
ಅಷ್ಟೇ ಅಲ್ಲ ಪಠ್ಯ ಪುಸ್ತಕದಲ್ಲಿ ’ಇಂಡಿಯಾ’ದ ಬದಲಿಗೆ ಭಾರತದ ಹೆಸರನ್ನು ’ಸೌತ್ ಏಷ್ಯಾ’ ಎಂದು ಹೆಸರಿಸಲಾಗಿದೆ. ದೇಶದ ಗೌರವಾತ್ಮಕ ಗುರುತನ್ನು ಕುಗ್ಗಿಸುವ ನಿಟ್ಟಿನಲ್ಲಿ ಈ ಕಾರ್ಯ ಮಾಡಲಾಗಿದೆ ಎಂದು ಅಲ್ಲಿನ ಹಿಂದೂಗಳು ಆರೋಪಿಸಿದ್ದಾರೆ.
ವೈವಿಧ್ಯತೆ ಸ್ವೀಕರಿಸಿದ ಹಿಂದೂ ಧರ್ಮದ ಕಡಗಣನೆ, ಜಾತಿಯೊಂದಿಗೆ ಧರ್ಮವನ್ನು ಲಿಂಕ್ ಮಾಡುವುದು, ವಾಲ್ಮೀಕಿ, ವ್ಯಾಸರಂತಹ ಹಿಂದುಳಿದ ವರ್ಗದವರು ಧರ್ಮಕ್ಕೆ ನೀಡಿದ ಕೊಡುಗೆಯ ನಿರ್ಲಕ್ಷ್ಯ ಮುಂತಾದವುಗಳು ಪಠ್ಯದ ಅಜೆಂಡಾದಲ್ಲಿತ್ತು ಎನ್ನಲಾಗಿದೆ.
ಹಿಂದೂಗಳ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಕ್ಯಾಲಿಪೋರ್ನಿಯಾ ಶಿಕ್ಷಣ ಇಲಾಖೆ ಬದಲಾವಣೆಗಳ ನಿರ್ಧಾರದಿಂದ ಹಿಂದಕ್ಕೆ ಸರಿದಿದೆ.
ಎಡಪಂಥೀಯ ಸ್ಕಾಲರ್ಗಳ ಅಭಿರುಚಿಗೆ ತಕ್ಕಂತೆ, ಅವರ ಸಲಹೆಗಳ ಮೇರೆಗೆ ಈ ಬದಲಾವಣೆಗಳನ್ನು ತರಲು ಹೊರಡಲಾಗಿತ್ತು, ಆದರೆ ಎಡಪಂಥೀಯರ ಕುತಂತ್ರವನ್ನು ಹಿಂದೂ ಯುವ ಹೋರಾಟಗಾರರು ಹತ್ತಿಕ್ಕಿದ್ದಾರೆ ಎಂದು ಆರ್ಎಸ್ಎಸ್ ವಕ್ತಾರ ಮನಮೋಹನ್ ವೈದ್ಯ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.