ನವದೆಹಲಿ: ಟಿ20 ವಿಶ್ವಕಪ್ನಲ್ಲಿ ಮಹತ್ವದ ಸಾಧನೆ ಮಾಡುವ ಛಲದೊಂದಿಗೆ ಭಾರತಕ್ಕೆ ಆಗಮಿಸಿದ್ದ ಪಾಕಿಸ್ಥಾನದ ಕ್ರಿಕೆಟ್ ತಂಡ ಸೋತು ಸುಣ್ಣವಾಗಿ ತವರಿಗೆ ವಾಪಾಸ್ಸಾಗಿದೆ. ಆದರೆ ಅಲ್ಲಿನ ಅಭಿಮಾನಿಗಳು ಅವರನ್ನು ಸ್ವಾಗತಿಸಿದ ರೀತಿ ಮಾತ್ರ ಅತಿರೇಕದ ಪರಮಾಧಿಯನ್ನು ತೋರಿಸಿತ್ತು.
ಲಾಹೋರ್ನ ಅಲ್ಲಾಮ್ ಇಕ್ಬಾಲ್ ಇಂಟರ್ನ್ಯಾಷನಲ್ ಏರ್ಪೋರ್ಟ್ಗೆ ಬಂದಿಳಿದಂತೆ ಅವರನ್ನು ’ಶೇಮ್ ಶೇಮ್’ ಎಂಬ ಘೋಷಣೆಯ ಮೂಲಕ ಸ್ವಾಗತ ಮಾಡಲಾಗಿದೆ.
ಆಟಗಾರರಿಗೆ ಬಿಗಿ ಭದ್ರತೆಯನ್ನು ನೀಡಲಾಗಿದ್ದ ಕಾರಣ ಯಾವ ಅಭಿಮಾನಿಗಳೂ ಅವರ ಮೇಲೆ ಮುಗಿ ಬೀಳಲಿಲ್ಲ, ಆದರೆ ಕೆಟ್ಟ, ಅವಮಾನಕಾರಿ ಘೋಷಣೆಗಳು ಕ್ರಿಕೆಟಿಗರ ಮನ ನೋಯಿಸಿದಂತು ನಿಜ.
ಜಾಣತನ ಮೆರೆದಿರುವ ತಂಡದ ನಾಯಕ ಶಾಯಿದ್ ಅಫ್ರಿದಿ ಮಾತ್ರ ಪಾಕಿಸ್ಥಾನಕ್ಕೆ ತೆರಳದೆ ದುಬೈಗೆ ತೆರಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.