ಮಂಡ್ಯ : ಶಾಲೆಗಳ ರಜಾ ಅವಧಿಯಲ್ಲಿ ಬರಪೀಡಿತ ಜಿಲ್ಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಸರಕಾರವು ವಿಸ್ತರಿಸಿದೆ. ರಾಜ್ಯದ 137 ಬರಪೀಡಿತ ತಾಲೂಕುಗಳಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಿದೆ.
ಎಪ್ರಿಲ್ 11 ರಿಂದ ಮೇ 28 ರ ವರೆಗೆ ಸರಕಾರದ ಶಾಲೆಗಳಿಗೆ ಬೇಸಿಗೆ ರಜೆ ನೀಡಿದ್ದು, ಈ ಸಂದರ್ಭ ಸರಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಬಿಸಿಯೂಟ ಯೋಜನೆಯನ್ನು ವಿಸ್ತರಿಸಲಾಗಿದೆ. ಬಿಸಿಯೂಟ ತಯಾರಿಕೆ ಸಂದರ್ಭ ಆಹಾರ ಪದಾರ್ಥಗಳನ್ನು ವ್ಯರ್ಥಪಡಿಸದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಕೆ.ಎಸ್.ಸತ್ಯಮೂರ್ತಿ ಆದೇಶಿಸಿದ್ದಾರೆ.
ಸರಕಾರ ಬರನಿರ್ವಹಣೆಯಲ್ಲಿ ಎಡವಿದೆ. ಇಲಾಖೆಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಪ್ರತಿಪಕ್ಷಗಳು ಸೇರಿದಂತೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಸರಕಾರಕ್ಕೆ ಚಾಟಿ ಬೀಸಿದ್ದರು. ಎ. 2 ತನಕ ಎರಡು ದಿನಗಳ ಕಾಲ ಅಧಿವೇಶನವನ್ನೂ ವಿಸ್ತರಿಸಲಾಗಿತ್ತು. ಆ ಹಿನ್ನಲೆಯಲ್ಲಿ ಸರಕಾರದ ಈ ಕ್ರಮ ಕುತೂಹಲ ಹುಟ್ಟಿಸಿದೆ.
ಬರನಿರ್ವಹಣೆ ಸಂದರ್ಭ ಸರಕಾರದ ಯೋಜನೆಗಳಿಂದ ಭ್ರಷ್ಟಾಚಾರ ನಡೆಯುವ ಸಾಧ್ಯತೆಗಳಿವೆ ಎಂಬ ಮಾತುಗಳಿದ್ದು ಸರಕಾರ ಈ ಬಗ್ಗೆ ಚಿಂತಿಸಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.