ನವದೆಹಲಿ: ವಿದ್ಯಾರ್ಥಿಗಳನ್ನು ’ಪ್ರಾಕ್ಸಿ’ಗಳನ್ನಾಗಿಸುವ ಮೂಲಕ ಕಾಂಗ್ರೆಸ್ ಯುದ್ಧ ಗೆಲ್ಲುವ ಪ್ರಯತ್ನ ಮಾಡುತ್ತಿದೆ, ಆದರೆ ಇದರಲ್ಲಿ ಅದು ಎಂದೂ ಯಶಸ್ವಿಯಾಗಲಾರದು ಎಂದು ಬಿಜೆಪಿ ಹೇಳಿದೆ.
ಕನ್ಹಯ್ಯ ಕುಮಾರ್ನನ್ನು ಕಾಂಗ್ರೆಸ್ ದುರ್ಬಳಕೆ ಮಾಡಿಕೊಳ್ಳುತ್ತಿದೆ, ರೋಹಿತ್ ವೆಮುಲಾ ಸಾವಿಗೆ ಕಾರಣವಾದುದು ಯುಪಿಎಯ ನಿಯಮಗಳು ಆದರೆ ಇದರ ಕಡೆಯಿಂದ ಜನರ ಗಮನ ಬೇರೆಡೆ ಸೆಳೆಯಲು ಕಾಂಗ್ರೆಸ್ ಕುತಂತ್ರ ಮಾಡುತ್ತಿದೆ, ಇದಕ್ಕಾಗಿ ಕನ್ಹಯ್ಯನನ್ನು ಅಲ್ಲಿಗೆ ಕಳುಹಿಸಿಕೊಟ್ಟಿದೆ ಎಂದು ಆಪಾದಿಸಿದೆ.
ದೇಶದ್ರೋಹದ ಆರೋಪ ಹೊತ್ತಿರುವವರ ಜೊತೆ ಕಾಂಗ್ರೆಸ್ ಜೈಜೋಡಿಸಿದೆ ಎಂದಿರುವ ಬಿಜೆಪಿ, ವಿಶ್ವವಿದ್ಯಾಲಯಗಳನ್ನು ತನ್ನ ರಾಜಕೀಯದ ಕೇಂದ್ರವನ್ನಾಗಿ ಮಾಡದಂತೆ ಕಾಂಗ್ರೆಸ್ಗೆ ಎಚ್ಚರಿಕೆ ನೀಡಿದೆ.
ವೆಮುಲಾಗಿಂತ ಮೊದಲು 9 ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಯಾವ ವಿದ್ಯಾರ್ಥಿಗಳೂ ತಾರತಮ್ಯ ಅನುಭವಿಸಬಾರದು ಎಂಬ ನಿಟ್ಟಿನಲ್ಲಿ ಮೋದಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಬಿಜೆಪಿಯ ರಾಷ್ಟ್ರ ಕಾರ್ಯದರ್ಶಿ ಶ್ರೀಕಾಂತ್ ಶರ್ಮಾ ಹೇಳಿದ್ದಾರೆ.
ತಾನು ನೇರವಾಗಿ ಜಯಿಸಲಾಗದ ಯುದ್ಧವನ್ನು ವಿದ್ಯಾರ್ಥಿಗಳನ್ನು ’ಪ್ರಾಕ್ಸಿ’ಗಳನ್ನಾಗಿಸಿ ಜಯಿಸಲು ಕಾಂಗ್ರೆಸ್ ಮುಂದಾಗಿದೆ ಎಂದು ಅವರು ಆರೋಪಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.