ಚೆನ್ನೈ: ಶಂಕರ ರಾಮನ್ ಪ್ರಕರಣದಲ್ಲಿ ಕಂಚಿ ಸ್ವಾಮಿ ಜಯೇಂದ್ರ ಸರಸ್ವತಿಗಳ ಯಾವುದೇ ಪಾತ್ರವಿರಲಿಲ್ಲ, ರಾಜಕೀಯ ಕಾರಣಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ.
ಚೆನ್ನೈನಲ್ಲಿ ನಡೆದ ಶ್ರೀಗಳ ಸನ್ಮಾನ ಕಾರ್ಯಕ್ರಮ ’ಸಹಸ್ತ್ರ ಚಂದ್ರ ದರ್ಶನ್’ನಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
’ವರ್ಷಗಳ ಹಿಂದೆ ರಾಜಕೀಯ ಉದ್ದೇಶದಿಂದ ಕಂಚಿ ಮಠದ ವಿರುದ್ಧ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳಲಾಯಿತು, ಅದರ ವಿರುದ್ಧ ದೊಡ್ಡ ಕ್ರಮವನ್ನು ತೆಗೆದುಕೊಳ್ಳಲಾಯಿತು. ಆದರೆ ಇದರಲ್ಲಿ ಯಾವ ಸತ್ಯವೂ ಇಲ್ಲ ಎಂಬುದು ಎಲ್ಲರಿಗೂ ತಿಳಿದಿತ್ತು. ಸತ್ಯ ಎಂದಿಗೂ ಅಡಗಿ ಕುಳಿತುಕೊಳ್ಳಲ್ಲ’ ಎಂದಿದ್ದಾರೆ.
ಸ್ವಾಮಿಗಳ ಪರವಾಗಿ ನಾನೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೆ ಎಂಬುದನ್ನು ಷಾ ಅವರು ಈ ಸಂದರ್ಭ ಸ್ಮರಿಸಿದರು.
2013ರಲ್ಲಿ ಸ್ವಾಮೀಜಿಗಳನ್ನು ಮತ್ತು ಅವರ ೧೨ ಶಿಷ್ಯರನ್ನು ಕೊಲೆ ಪ್ರಕರಣದಿಂದ ಖುಲಾಸೆಗೊಳಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.