ಆಂಧ್ರ: ನಮ್ಮ ದೇಶದಲ್ಲಿ ಫಿಝಾ, ಬರ್ಗರ್ಗಳು ಕ್ಷಣ ಮಾತ್ರದಲ್ಲಿ ಗ್ರಾಹಕನ ಮನೆ ತಲುಪುತ್ತದೆ, ಆದರೆ ಸರ್ಕಾರಿ ಸವಲತ್ತುಗಳಿಗೆ ಮಾತ್ರ ಜಾತಕ ಪಕ್ಷಗಳಂತೆ ತಿಂಗಳಾನುಗಟ್ಟಲೆ ಕಾಯಬೇಕು, ಸವಲತ್ತುಗಳನ್ನು ಪಡೆದುಕೊಳ್ಳಲು ಮೈಲಿಗಟ್ಟಲೆ ನಡೆಯಬೇಕು.
ಆಂಧ್ರದ 65 ವರ್ಷದ ವಿಕಲಚೇತನ ಮಹಿಳೆಯೊಬ್ಬಳು ಪ್ರತಿ ತಿಂಗಳು ತನ್ನ ವೃದ್ಧಾಪ್ಯ ವೇತನ ರೂ. 300 ನ್ನು ಪಡೆಯಲು 2 ಕಿ.ಮೀ ದೂರದಿಂದ ನಡೆದುಕೊಂಡು ಬರುತ್ತಾಳೆ. ಇದು ನಿಜಕ್ಕೂ ನೋಡುಗರ ಮನವನ್ನು ಕಲುಕುತ್ತದೆ.
ರುದನ ದೆಹುರಿ ಎಂಬ ಮಹಿಳೆಯ ಗಂಡ ಹಾಗೂ ಇಬ್ಬರು ಮಕ್ಕಳು 2 ವರ್ಷದ ಹಿಂದೆಯೇ ಆಕೆಯನ್ನು ತೊರೆದು ಹೋಗಿದ್ದಾರೆ. ಕೈಯನ್ನು ನೆಲಕ್ಕೆ ಊರಿಕೊಂಡೇ ನಡೆದಾಡಬೇಕಾದ ಸ್ಥಿತಿಯಲ್ಲಿರುವ ಅವಳು ಮನೆಯಲ್ಲಿ ಏಕಾಂಗಿಯಾಗಿ ಬದುಕುತ್ತಿದ್ದಾಳೆ.
ಜೀವನ ನಿರ್ವಹಣೆಗೆ ಸರ್ಕಾರದಿಂದ ದೊರೆಯುವ ರೂ. 300 ಆಕೆಗೆ ಅತ್ಯಗತ್ಯ, ಆದರೆ ಅದನ್ನು ಆಕೆಯ ಮನೆಬಾಗಿಲಿಗೆ ತಲುಪಿಸುವವರು ಯಾರೂ ಇಲ್ಲ. ಹೀಗಾಗಿ ಆಕೆ ಎರಡು ಕಿ.ಮೀ ನಡೆದುಕೊಂಡು ಹೋಗಿ ಹಣವನ್ನು ತರುತ್ತಾಳೆ.
ಮನೆಗೆ ಪೋಸ್ಟ್ ಮೂಲಕ ಹಣ ಕಳುಹಿಸಿ ಕೊಡಿ ಎಂದು ಅಧಿಕಾರಿಗಳನ್ನು ಎಷ್ಟೇ ಗೋಗರೆದುಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ರುದನ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.