ಮಡ್ಗಾಂವ್: ಗೋವಾ ರಾಜ್ಯ ಸಾಂಸ್ಕೃತಿಕ ವಿಷಯಗಳಿಗೆ ವಿಶೇಷವಾದುದು. ಅಲ್ಲಿಯ ರೈಲ್ವೇ ನಿಲ್ದಾಣಗಳೂ ಅಷ್ಟೇ ವಿಶೇಷತೆಯನ್ನು ಪಡೆದಿದೆ. ಭಾರತದ ಇತರ ರೈಲ್ವೇ ನಿಲ್ದಾಣಗಳಲ್ಲಿ ಪ್ರಯಾಣಿಕರು, ವ್ಯಾಪಾರಿಗಳು… ಹೀಗೆ ಎಲ್ಲರಿಂದ ತುಂಬಿ ಗಿಜಿಗುಡುತ್ತಿರುತ್ತದೆ. ರೈಲಿಗಾಗಿ ಕಾಯುವಿಕೆ, ಬಂದಾಕ್ಷಣ ಹತ್ತುವ ಅವಸರ, ಹೀಗೆ ಯಾವಾಗಲೂ ರೈಲ್ವೆ ನಿಲ್ದಾಣ ಏನೋ ಒಂದು ಕಿರಿಕಿರಿ ಎನ್ನಿಸುವಷ್ಟು ಮಟ್ಟಕ್ಕೆ ಇರುತ್ತದೆ.
ಆದರೆ ದಕ್ಷಿಣ ಗೋವಾದ ಮಡ್ಗಾಂವ್ ರೈಲು ನಿಲ್ದಾಣ ಮಾತ್ರ ಹಾಗಲ್ಲ. ಏಕೆಂದರೆ ಇಲ್ಲಿ ಇರುವ ಪ್ರಯಾಣಿಕರಿಗೆ ಬ್ಯಾಂಡ್ನೊಂದಿಗೆ ವಾದ್ಯಗಳನ್ನು ನುಡಿಸುತ್ತ ಪ್ರಯಾಣಿಕರನ್ನು ಮನರಂಜಿಸುವ ಲೈವ್ ಮ್ಯೂಸಿಕ್ ಪ್ರಾರಂಭವಾಗಿದೆ.
ಈ ವಿಶಿಷ್ಟ ಸೇವೆ ಭಾರತೀಯ ರೈಲ್ವೆ ಇತಿಹಾಸದಲ್ಲೇ ನಡೆದಿರುವುದು ಮೊದಲಿರಬಹುದು. ಕೊಂಕಣ್ ರೈಲ್ವೆ ಕಾರ್ಪೋರೇಶನ್ ಲಿಮಿಟೆಡ್ ವತಿಯಿಂದ ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿರುವ ಪ್ರಯಾಣಿಕರನ್ನು ಮನರಂಜಿಸಲು ಈ ವಿಶಿಷ್ಟ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
ಕೊಂಕಣ ರೈಲ್ವೆ ಕಾರ್ಪೋರೇಶನ್ ನೌಕರರು ಮಾ. 12, 2016ರಂದು ಮೊದಲ ಲೈವ್ ಬ್ಯಾಂಡ್ ಪ್ರದರ್ಶನವನ್ನು ಮಡ್ಗಾಂವ್ ರೈಲು ನಿಲ್ದಾಣದಲ್ಲಿ ನಡೆಸಿ, ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.
’ಆರೋಹಿ’ ಎಂಬ ಬ್ಯಾಂಡ್ ಲೈವ್ ಮ್ಯೂಸಿಕ್ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದು, ಹಲವು ಬಾರಿ ಜನಪ್ರಿಯ ಗೀತೆಗಳನ್ನು ನುಡಿಸಿದೆ. ಕೊಂಕಣಿ, ಹಿಂದಿ ಮತ್ತು ದೇಶಭಕ್ತಿ ಗೀತೆಗಳನ್ನು ನುಡಿಸಿ ಜನರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದೆ.
ಕೊಂಕಣ್ ರೈಲ್ವೆಯು ಈ ಕಾರ್ಯವನ್ನು ದಿನಂಪ್ರತಿ ಮುಂದುವರೆಸಲು ಚಿಂತನೆ ನಡೆಸಿದ್ದು, ಇದನ್ನು ಕಾರ್ಯರೂಪಕ್ಕೆ ತರಲು ಮುಂದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.